ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ದಾಖಲೆ ಒದಗಿಸಿ: ಬೆಂಗಳೂರಿನಲ್ಲಿ ಶಾಸಕ‌ ಹರೀಶ್ ಪೂಂಜ ಮನವಿ

ಬೆಳ್ತಂಗಡಿ: ರಾಜ್ಯದಲ್ಲಿ ಹಲವಾರು ದಶಕಗಳಿಂದ ಹಿಂದುಗಳು ಭಜನೆ, ಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳನ್ನು ಧಾರ್ಮಿಕ ಶ್ರದ್ಧಾ ಕೇಂದ್ರಗಳಾದ ಭಜನಾ ಮಂದಿರಗಳಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಹೆಚ್ಚಿನ ಭಜನಾ ಮಂದಿರದ ಜಾಗಗಳಿಗೆ ಸೂಕ್ತ ದಾಖಲೆಗಳಿಲ್ಲದೆ ಕಂದಾಯ ಇಲಾಖೆಯ ಜಾಗದಲ್ಲಿದೆ. ಈ ಸಲುವಾಗಿ ರಾಜ್ಯದ ಎಲ್ಲಾ ಭಜನಾ ಮಂದಿರಗಳಿಗೂ ಕಂದಾಯ ಇಲಾಖೆಯಿಂದ ಸೂಕ್ತ ದಾಖಲೆ ಒದಗಿಸಿ ಕೊಡಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಕಂದಾಯ ಸಚಿವ ಆರ್.ಅಶೋಕ್ ಹಾಗೂ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರಿಗೆ ಮನವಿ ನೀಡಿದರು.

ಕಂದಾಯ ಇಲಾಖೆಯ ಸುಪರ್ದಿಯಲ್ಲಿರುವ ಹಲವಾರು ವರ್ಷಗಳಿಂದ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ, ಸೂಕ್ತ ದಾಖಲೆಗಳಿಲ್ಲದ ದ.ಕ. ಜಿಲ್ಲೆ ಸಹಿತ ರಾಜ್ಯದ ಇತರ ಜಿಲ್ಲೆಗಳಲ್ಲೂ ಇರುವ ಭಜನಾ ಮಂದಿರಗಳಿಗೆ ಕಂದಾಯ ಇಲಾಖೆ ದಾಖಲೆ ಒದಗಿಸಿಕೊಡುವಂತೆ ಬೆಂಗಳೂರಿನಲ್ಲಿ ಸಚಿವರ ಕಚೇರಿಯಲ್ಲಿ ಮನವಿ ನೀಡಿದರು.

ಈ ಸಂದರ್ಭ ಭಟ್ಕಳ ಶಾಸಕ ಸುನಿಲ್ ನಾಯ್ಕ್ ಜೊತೆಗಿದ್ದರು.

error: Content is protected !!