ವೀರಕೇಸರಿ ಬೆಳ್ತಂಗಡಿ: 125ನೇ ಸೇವಾಯೋಜನೆ ‘ಆಸರೆ’ ಮನೆ ಗೃಹಪ್ರವೇಶ, ಹಸ್ತಾಂತರ

ಉಜಿರೆ: ವೀರಕೇಸರಿ ಬೆಳ್ತಂಗಡಿ ನಿಸ್ವಾರ್ಥ ಸೇವೆಯ ಮೂಲಕ ವೀರಕೇಸರಿ ‌ಬೆಳ್ತಂಗಡಿ ಮಾದರಿಯಾಗಿದೆ. ಉತ್ತಮ ಕಾರ್ಯಗಳನ್ನು ‌ಮಾಡುವ ಮೂಲಕ ಸಾವಿರ ಮನಸುಗಳಲ್ಲಿ ಆಸರೆ ಪಡೆದಿದೆ ಎಂದು ವಾಗ್ಮಿ ಸಹನಾ ಕುಂದರ್ ಸೋಡ ಅವರು ಹೇಳಿದರು.

ಅವರು‌ ವೀರಕೇಸರಿ ಬೆಳ್ತಂಗಡಿಯ ಆಶ್ರಯದಲ್ಲಿ ಉಜಿರೆ, ಓಡಲ ಕೊಡಿಜಾಲಿನ 125 ಸೇವಾಯೋಜನೆ ‘ಆಸರೆ’ ಮನೆಯ ಗೃಹಪ್ರವೇಶ ಮತ್ತು ಹಸ್ತಾಂತರ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ನೆರವೇರಿಸಿದರು.

ಉಜಿರೆ ಬಡಕುಟುಂಬವೊಂದಕ್ಕೆ ಆಸರ ಮನೆಯನ್ನು ನಿರ್ಮಿಸಿ ಕೊಟ್ಟ ವೀರಕೇಸರಿ ಸಂಘಟನೆ ಗೃಹಪ್ರವೇಶ ಮಾಡಿಸಿ, ಫಲಾನುಭವಿಗಳಿಗೆ ಹಸ್ತಾಂತರಿಸಿದರು. ವೇದಿಕೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಅಕ್ಷಯ್ ಕೋಟ್ಯಾನ್, ಸುಶಾಂತ್ ಕನ್ನಡಿಕಟ್ಟೆ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಗೀತಾಂಜಲಿ ಸುವರ್ಣ, ಸುಧೀರ್ ಸೋನು, ಪ್ರಭಾಕರ್ ಸಿ.ಜಿ, ಗುರುದತ್ ನಾಯಕ್ , ಕೃಷ್ಣಮೂರ್ತಿ.ಕೆ, ಕೃಷ್ಣಪ್ಪ ಗುಡಿಗಾರ್, ಪ್ರವೀಣ್, ರವಿ ಚಕ್ಕಿತ್ತಾಯ, ಯಶವಂತ್ ಗೌಡ, ರಾಮು ಬಿ.ಟಿ.ಎನ್, ಹರೀಶ್ ಸುವರ್ಣ, ಉದಯ ಉಪಸ್ಥಿತರಿದ್ದರು.

error: Content is protected !!