ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಾಲೂಕು ಘಟಕದಿಂದ ‌ಪ್ರತಿಭಟನೆ

ಬೆಳ್ತಂಗಡಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ದೇಶ ವಿರೋಧಿ ಘೋಷಣೆ ಕೂಗಿದ ಮತಾಂಧರ ವಿರುದ್ಧ ಬೆಳ್ತಂಗಡಿ ಬಸ್ ನಿಲ್ದಾಣ ಬಳಿ ಪ್ರತಿಭಟನೆ ಮಾಡಲಾಯಿತು.
ಪ್ರತಿಭಟನೆಯಲ್ಲಿ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಶೆಟ್ಟಿ ಕರಂಬಾರು ಮಾತನಾಡಿ, ದೇಶ ವಿರೋಧಿ ಘೋಷಣೆ ಕೂಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಎಸ್.ಡಿ.ಪಿ.ಐ. ಸಂಘಟನೆಯನ್ನು ದೇಶದಾದ್ಯಂತ ನಿಷೇಧಿಸಬೇಕು ಎಂದು ಆಗ್ರಹಿಸಿದರು.

ಈ ಪ್ರತಿಭಟನಾ ಸಭೆಯಲ್ಲಿ 100ಕ್ಕೂ ಹೆಚ್ಚು ಎ.ಬಿ.ವಿ.ಪಿ. ಕಾರ್ಯಕರ್ತರು ಪಾಲ್ಗೊಂಡಿದ್ದರು. ಪರಿಷತ್ ಹಿರಿಯ ಕಾರ್ಯಕರ್ತರಾದ ಯತೀಶ್ ಶೆಟ್ಟಿ ಫಣೆಕ್ಕರ, ಪ್ರಜ್ವಲ್ ಶೆಟ್ಟಿ ಕರಂಬಾರು ಹಾಗೂ ವಿದ್ಯಾರ್ಥಿ ಪರಿಷತ್ ನ ರಾಜ್ಯ ಕಾರ್ಯಕಾರಣಿ ಸದಸ್ಯ ಶರತ್, ತಾಲೂಕು ಸಂಚಾಲಕ್ ಮೇಘರಾಜ್, ಬೆಳ್ತಂಗಡಿ ನಗರ ಕಾರ್ಯದರ್ಶಿ ಸುಮಂತ್, ಎ.ಬಿ.ವಿ.ಪಿ. ಪ್ರಮುಖ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಇದ್ದರು.

error: Content is protected !!