ಒಕ್ಕಲಿಗ ಗೌಡರ ಕ್ರಿಕೆಟ್ ಪ್ರೀಮಿಯರ್ ಲೀಗ್: ರಂಜನ್ ಗೌಡ ಮಾಲಿಕತ್ವದ ಕೆಂಪೇಗೌಡ ಬ್ರಿಗೇಡಿಯರ್ಸ್ ಚಾಂಪಿಯನ್:

 

 

ಬೆಳ್ತಂಗಡಿ:ಮಂಗಳೂರಿನ ಸಹ್ಯಾದ್ರಿ ಕ್ರೀಡಾಂಗಣದಲ್ಲಿ ಮಾರ್ಚ್ 07 ಮತ್ತು 8 ರಂದು  ನಡೆದ ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತು ಕಾಸರಗೋಡು 4 ಜಿಲ್ಲೆಗಳನ್ನೊಳಗೊಂಡ ಒಕ್ಕಲಿಗ ಗೌಡರ ಕ್ರಿಕೆಟ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ ಬೆಳ್ತಂಗಡಿಯ ಉದ್ಯಮಿ ರಂಜನ್ ಜಿ ಗೌಡ ಮಾಲಿಕತ್ವದ ಬೆಳ್ತಂಗಡಿ ಕೆಂಪೇಗೌಡ ಬ್ರಿಗೇಡಿಯರ್ಸ್ ಪ್ರಥಮ ಸ್ಥಾನ ಪಡೆದುಕೊಂಡು ಒಂದು ಲಕ್ಷದ ಬೈಕ್ ಮತ್ತು 66,666 ರೂಪಾಯಿ ನಗದು ಬಹುಮಾನವನ್ನು ಪಡೆದುಕೊಂಡಿತು.

ಬಹುಮಾನ ವಿತರಣೆಯ ಸಂದರ್ಭದಲ್ಲಿ ಒಕ್ಕಲಿಗ ಮಾತೃ ಸಂಘದ ಅಧ್ಯಕ್ಷ ಲೋಕಯ್ಯ ಗೌಡ ಅರೆ ಭಾಷೆ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಾಜಿ , ಪಿ.ಎಸ್ ಗಂಗಾಧರ್ , ಯುವ ಒಕ್ಕಲಿಗ ಗೌಡರ ಅಧ್ಯಕ್ಷ ಕಿರಣ್ ಪುಡ್ಲೆಗುತ್ತು ಹಾಗೂ ಮಂಗಳೂರು ಜಿಲ್ಲೆಯ ಒಕ್ಕಲಿಗ ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

 

error: Content is protected !!