
ಬೆಳ್ತಂಗಡಿ:ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿ ಕಲಾವಿದರಿಂದ ಆಳ್ವಾಸ್ ನುಡಿಸಿರಿ ವಿರಾಸತ್ ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ಉಜಿರೆಯಲ್ಲಿ ಮಾ 22 ರಂದು ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಲಿದೆ.ಇಂದು ಸಂಜೆ ಉಜಿರೆ ಶಾರದಾ ಮಂಟಪದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚಿಸಲಾಯಿತು. ಮಾ 22 ರಂದು ಸಂಜೆ 5.30 ಗಂಟೆಗೆ ಉಜಿರೆ ಕೃಷ್ಣಾನುಗ್ರಹ ಸಭಾಭವನದಲ್ಲಿ ಕಾರ್ಯಕ್ರಮ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು ,ಕಾರ್ಯಕ್ರಮದಲ್ಲಿ ಸುಮಾರು ಆರು ಸಾವಿರ ಜನರು ಸೇರುವ ನಿರೀಕ್ಷೆ ಇದೆ.ಸಭೆಯಲ್ಲಿ
ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ, ಉದ್ಯಮಿಗಳಾದ ಶಶಿಧರ್ ಶೆಟ್ಟಿ ನವಶಕ್ತಿ, ಮೋಹನ್ ಕುಮಾರ್, ಬಿ.ಎ. ಕುಮಾರ ಹೆಗ್ಡೆ,, ಅನಂತ್ ಭಟ್ ಮಚ್ಚಿಮಲೆ, ಮೋಹನ್ ಶೆಟ್ಟಿಗಾರ್, ಪುಷ್ಪರಾಜ್ ಶೆಟ್ಟಿ, ರ಼ಘುರಾಮ್ ಶೆಟ್ಟಿ ಸಾಧನ ಉಜಿರೆ, ಚಿದಾನಂದ ಇಡ್ಲಾ, ದೇವದಾಸ್ ಶೆಟ್ಟಿ ಹಿಬರೋಡಿ,ಉಮೇಶ್ ಶೆಟ್ಟಿ ಸೇರಿದಂತೆ ಇನ್ನಿತರ ಗಣ್ಯರು ಸಭೆಯಲ್ಲಿ ಭಾಗವಹಿಸಿ ಅನಿಸಿಕೆ ಅಭಿಪ್ರಾಯ ಹಂಚಿಕೊಂಡು ಕಾರ್ಯಕ್ರಮ ಯಶಸ್ವಿಯ ಬಗ್ಗೆ ಚರ್ಚೆ ನಡೆಸಿದರು.