ಕೇಳ್ತಾಜೆ: ನೂತನ ಮಸ್ಜಿದ್, ಮದರಸ ಉದ್ಘಾಟನೆ: ಖಾಝಿಯಾಗಿ ಕೂರತ್ ತಂಙಳ್‌

ಬೆಳ್ತಂಗಡಿ: ಇಂಡಿಯನ್ ಗ್ರ್ಯಾಂಡ್ ಮುಫ್ತಿ, ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರ ಸಾರಥ್ಯದಲ್ಲಿ, ರಿಲೀಫ್‌ ಚಾರಿಟೇಬಲ್ ಫೌಂಡೇಶನ್ ಆಫ್ ಇಂಡಿಯಾ(ಆರ್.ಸಿ.ಎಫ್.ಐ) ವತಿಯಿಂದ ಊರವರ ಸಹಕಾರದೊಂದಿಗೆ ಕೇಳ್ತಾಜೆಯಲ್ಲಿ ನಿರ್ಮಿಸಿದ ಉಮರುಲ್ ಫಾರೂಕ್ ಜುಮ್ಮಾ ಮಸ್ಜಿದ್ ಮತ್ತು ಸಿರಾಜುಲ್ ಹುದಾ ಮದರಸ ಉದ್ಘಾಟನೆ ನಡೆಯಿತು.
ದ.ಕ‌ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿ ಶೈಖುನಾ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಕೂರತ್, ಜುಮಾ ನಮಾಝ್‌ ನೆರವೇರಿಸಿ ಆಶೀರ್ವಚನ ನೀಡಿದರು.

ಮಸ್ಜಿದ್‌ನ ಧಾರ್ಮಿಕ ವಕ್ಫ್ ನಿರ್ವಹಣೆ‌‌ಯನ್ನು ಕೂರತ್ ತಂಙಳ್ ನಡೆಸಿದರು. ಈ ವೇಳೆ ಕೂರತ್ ತಂಙಳ್‌ ಅವರನ್ನು ಜಮಾಅತ್ ನ ಖಾಝಿಯಾಗಿ ಹಾಗೂ ಸಯ್ಯಿದ್ ಸಾದಾತ್‌ ತಂಙಳ್ ರನ್ನು ಸಹಾಯಕ ಖಾಝಿಯಾಗಿ ಅನುಮೋದಿಸಲಾಯಿತು.
ಅಧ್ಯಕ್ಷತೆಯನ್ನು ಮಸ್ಜಿದ್ ಅಧ್ಯಕ್ಷ ಅಬ್ದುಲ್ ಹಮೀದ್ ಟಿ. ವಹಿಸಿದ್ದರು.

ಸಮಾರಂಭದಲ್ಲಿ ಸಯ್ಯಿದ್ ಮುರ ತಂಙಳ್, ಸಯ್ಯಿದ್ ಕಾಜೂರು ತಂಙಳ್, ಸಯ್ಯಿದ್ ಇಸ್ಮಾಯಿಲ್ ತಂಙಳ್, ಸಯ್ಯಿದ್ ಜಿಫ್ರಿ ತಂಙಳ್, ಸಯ್ಯಿದ್ ತೀರ್ಥಹಳ್ಳಿ ತಂಙಳ್, ಗಣ್ಯರಾದ ನಝೀರ್ ಮುಸ್ಲಿಯಾರ್, ಅಬ್ದುಲ್ ಹಮೀದ್ ಫೈಝಿ ಕಿಲ್ಲೂರು, ಎನ್.ಕೆ. ಹಸೈನಾರ್ ಮುರ, ಮರ್ಕಝ್ ಆರ್‌ಸಿಎಫ್‌ಐ ಪ್ರಮುಖರಾದ ರಶೀದ್ ಪುಣ್ಣಶ್ಶೇರಿ, ಮನ್ನಾಫ್, ಶಿಫಾಫ್, ಫಿರೋಝ್, ತಸ್ಲೀಂ ಸಖಾಫಿ ಮತ್ತು ವಝೀರ್, ಹಾಜಿ ಎಚ್.ಕೆ. ಇಸ್ಮಾಯಿಲ್, ಹಬೀಬ್ ಸಾಹೇಬ್ ನಡ, ಕೆ.ಯು. ಇಬ್ರಾಹಿಂ ಕಾಜೂರು, ಯಾಕೂಬ್ ಮುಸ್ಲಿಯಾರ್ ಗುರುವಾಯನಕೆರೆ, ಅಬ್ದುರ್ರಹ್ಮಾನ್ ಸುನ್ನತ್‌ಕೆರೆ, ಹಾಜಿ ಯಾಕೂಬ್ ಕನ್ಯಾಡಿ, ಇಬ್ರಾಹಿಂ ಸಿ.ಎಂ, ಕುಂಞಿಮೋನು ಕೇಳ್ತಾಜೆ, ಸಿದ್ದೀಕ್ ಉರುವಾಲ್‌ಪದವು ಮೊದಲಾದವರು ಉಪಸ್ಥಿತರಿದ್ದರು. ಹಾಜಿ ಅಬ್ದುಲ್ ರಝಾಕ್ ಸಖಾಫಿ‌ ಮಡಂತ್ಯಾರು ಸ್ವಾಗತಿಸಿದರು. ಮುಹಮ್ಮದ್ ಫಾರಿಸ್ ಖಿರಾಅತ್ ಪಠಿಸಿದರು.

ಬಾಕ್ಸ್;
ನೂತನ ಮಸ್ಜಿದ್‌ನ ಪ್ರಥಮ ಖುತುಬ ಪಾರಾಯಣವನ್ನು ಸಾದಾತ್ ತಂಙಳ್ ನೆರವೇರಿಸಿದರೆ, ಜುಮಾ ನಮಾಝ್‌ಗೆ ಕೂರತ್ ತಂಙಳ್ ನೇತೃತ್ವ ನೀಡಿದರು. ಖಾಝಿ ಸ್ವೀಕಾರದ ಬಳಿಕ ಇಬ್ಬರನ್ನೂ ನಿಲುವಂಗಿ ತೊಡಿಸಿ ವಿಶೇಷವಾಗಿ ಗೌರವಿಸಲಾಯಿತು.

error: Content is protected !!