ಬೆಳ್ತಂಗಡಿ ತಾಲೂಕು ಗ್ರಾಮ ಪಂಚಾಯತಿ ಚುನಾವಣೆ: 625 ಸ್ಥಾನಗಳಿಗೆ 1432 ಮಂದಿ ಅಭ್ಯರ್ಥಿಗಳ ಸ್ಪರ್ಧೆ: ಒಟ್ಟು 53 ನಾಮಪತ್ರಗಳು ತಿರಸ್ಕೃತ, 237 ವಾಪಾಸ್: 7 ಮಂದಿ ಅವಿರೋಧ ಆಯ್ಕೆ?

ಬೆಳ್ತಂಗಡಿ: ತಾಲೂಕಿನಲ್ಲಿ 48 ಗ್ರಾ.ಪಂ.ಗಳ ಪೈಕಿ ವೇಣೂರು ಮತ್ತು ಆರಂಬೋಡಿ ಗ್ರಾ.ಪಂ.ಗಳನ್ನು ಹೊರತು ಪಡಿಸಿ ತಾಲೂಕಿನ 46 ಗ್ರಾ.ಪಂ.ಗಳ 631 ಸ್ಥಾನಗಳಿಗೆ ಡಿ.27ರಂದು ಚುನಾವಣೆ ನಡೆಯಲಿದ್ದು, 1,439 ಮಂದಿ ಅಂತಿಮ ಕಣದಲ್ಲಿದ್ದಾರೆ.

1729 ಮಂದಿ 631 ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿದ್ದರು. ಡಿ.17ರಂದು ನಡೆದ ನಾಮಪತ್ರ ಪರಿಶೀಲನೆಯಲ್ಲಿ ಒಟ್ಟು 53 ನಾಮಪತ್ರಗಳು ತಿರಸ್ಕೃತಗೊಂಡಿದ್ದು ಒಟ್ಟು 1,676 ನಾಮಪತ್ರಗಳು ಕ್ರಮಬದ್ಧವಾಗಿದ್ದವು. ಬಳಿಕ ಡಿ.19 ರಂದು ನಡೆದ ನಾಮಪತ್ರಗಳ ಹಿಂತೆಗೆತ ಪ್ರಕ್ರಿಯೆಯಲ್ಲಿ ಒಟ್ಟು 237 ನಾಮಪತ್ರಗಳನ್ನು ವಾಪಾಸು ಪಡೆಯಲಾಗಿದೆ. ಪ್ರಸಕ್ತ 1,439 ಅಭ್ಯರ್ಥಿಗಳು ಚುನಾವಣೆ ಅಂತಿಮ ಕಣದಲ್ಲಿದ್ದಾರೆ.

46 ಗ್ರಾ.ಪಂ.ಗಳ ಒಟ್ಟು 631 ಸ್ಥಾನಗಳ ಪೈಕಿ ಒಟ್ಟು 6 ಗ್ರಾ.ಪಂ.ಗಳ 7 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದಾರೆ. ಅಧಿಕೃತ ಘೋಷಣೆ ಡಿ.30ರಂದು ನಡೆಯಲಿದೆ. ಪಡಂಗಡಿ-2, ಲಾಯಿಲ-1, ಮಿತ್ತಬಾಗಿಲು- 1, ಕಲ್ಮಂಜ- 1, ಮಡಂತ್ಯಾರ್ -1, ತೆಕ್ಕಾರ್-1 ಸೇರಿ, 7 ಸ್ಥಾನ ಹೊರತುಪಡಿಸಿ ಪ್ರಸಕ್ತ 624 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಬೆಳ್ತಂಗಡಿ ತಾಲೂಕಿನ 6 ಗ್ರಾ.ಪಂ.ನ 7ವಾರ್ಡ್ ಗಳಲ್ಲಿ ಅವಿರೋಧ ಆಯ್ಕೆ ನಡೆದಿದೆ. ಪಡಂಗಡಿ ಗ್ರಾ.ಪಂ.ನ ಗರ್ಡಾಡಿ 3ನೇ ವಾರ್ಡಿನಲ್ಲಿ ಬಿಜೆಪಿ ಬೆಂಬಲಿತ ಕೃಷ್ಣಪ್ಪ (ಅನುಸೂಚಿತ ಜಾತಿ), ಪಡಂಗಡಿ ಗ್ರಾ.ಪಂ.ನ ಗರ್ಡಾಡಿ 1ನೇ ವಾರ್ಡ್‌ನ ಬಿಜೆಪಿ ಬೆಂಬಲಿತ ಸುಮತಿ (ಸಾಮಾನ್ಯ ಮಹಿಳೆ), ಮಿತ್ತಬಾಗಿಲು ಗ್ರಾಮದ 3ನೇ ವಾರ್ಡ್‌ನ ಬಿಜೆಪಿ ಬೆಂಬಲಿತ ಶಾಂಭವಿ (ಸಾಮಾನ್ಯ ಮಹಿಳೆ), ಲಾಯಿಲ ಗ್ರಾ.ಪಂ. 2ನೇ ವಾರ್ಡ್‌ನ ಹಿಂದುಳಿದ ಅ ವರ್ಗ ಮಹಿಳೆ ಮೀಸಲು ಕ್ಷೇತ್ರದಿಂದ ರಜನಿ ಎಂ.ಆರ್. (ಬಿಜೆಪಿ ಬೆಂಬಲಿತ), ಕಲ್ಮಂಜ ಗ್ರಾ.ಪಂ.ನ ಕಲ್ಮಂಜ 3ನೇ ವಾರ್ಡಿನಿಂದ ಹಿಂದುಳಿದ ಅ ವರ್ಗ ಮಹಿಳೆ ಮೀಸಲು ಕ್ಷೇತ್ರದಿಂದ ಶೋಭಾವತಿ (ಬಿಜೆಪಿ ಬೆಂಬಲಿತ ), ತೆಕ್ಕಾರು ಗ್ರಾ.ಪಂ.ನ 2ನೇ ವಾರ್ಡಿನಿಂದ ಯಮುನಾ (ಅನುಸೂಚಿತ ಪಂಗಡ) ಮಹಿಳೆ ಮೀಸಲು ಕ್ಷೇತ್ರದಿಂದ (ಬಿಜೆಪಿ ಬೆಂಬಲಿತ), ಮಡಂತ್ಯಾರ್ ಗ್ರಾ.ಪಂ.ನ ಮಡಂತ್ಯಾರ್ 1ನೇ ವಾರ್ಡ್‌ನ ಅನುಸೂಚಿತ ಜಾತಿ ಮೀಸಲು ಕ್ಷೇತ್ರದಿಂದ ಗೋಪಾಲಕೃಷ್ಣ (ಬಿಜೆಪಿ ಬೆಂಬಲಿತ) ಆಯ್ಕೆಗೊಂಡವರು.

error: Content is protected !!