ಶಿಶಿಲ ತೋಟಕ್ಕೆ ನುಗ್ಗಿದ ಆನೆಗಳು ಆತಂಕದಲ್ಲಿ ಕೃಷಿಕರು

   

 

 

ಶಿಶಿಲ: ಆನೆಗಳು ತೋಟಕ್ಕೆ ನುಗ್ಗಿ ಬಾಳೆ ಹಾಗೂ ಅಡಿಕೆ ಮರಗಳನ್ನು ದ್ವಂಸ ಮಾಡಿದ ಘಟನೆ ಬೆಳ್ತಂಗಡಿ ತಾಲೂಕು ಶಿಶಿಲ ಗ್ರಾಮದ ಭಂಡಿಹೊಳೆ ಸಮೀಪ ನಡೆದಿದೆ.

 

ನಿನ್ನೆ ರಾತ್ರಿ ಭಂಡಿಹೊಳೆ ಸಮೀಪದ ನಾರಾಯಣ ದಾಮ್ಲೆ ,ಉಷಾ,ಹಾಗೂ ಮುರಳಿ ದಾಮ್ಲೆ ಎಂಬವರ ತೋಟಗಳಿಗೆ ಅಂದಾಜು ಎರಡು ದೊಡ್ಡ ಆನೆ ಹಾಗೂ ಒಂದು ಮರಿ ಆನೆ ಸೇರಿ ಒಟ್ಟು ಮೂರು ಆನೆಗಳ ಹಿಂಡು ದಾಳಿ ಮಾಡಿ ತೋಟವನ್ನು ದ್ವಂಸ ಗೊಳಿಸಿವೆ ಎಂದು ತಿಳಿದು ಬಂದಿದೆ.ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಅವರು ಸ್ಥಳಕ್ಕೆ ಬಂದ್ದು ಪರಿಶೀಲನೆ ನಡೆಸಿದ್ದಾರೆ .

error: Content is protected !!