ಎಲ್ಲಾ ಧರ್ಮ, ಪಂಥಗಳ ಮೂಲ ಉದ್ದೇಶ ಲೋಕ ಕಲ್ಯಾಣ: ಧರ್ಮಾಧಿಕಾರಿ‌ ಡಾ. ವೀರೇಂದ್ರ ಹೆಗ್ಗಡೆ: ಸರ್ವಧರ್ಮ ಸಮ್ಮೇಳನದ 88ನೇ ಅಧಿವೇಶನ ಉದ್ಘಾಟಿಸಿದ ಸಚಿವ ಸೋಮಣ್ಣ

ಬೆಳ್ತಂಗಡಿ: ಸಮಾನತೆ ಎಂಬುದು ‌ಧರ್ಮ ವಿರೋಧ ಪ್ರಜ್ಞೆಯಲ್ಲ. ಧರ್ಮದ ಹೊಸ ವ್ಯಾಖ್ಯಾನದಲ್ಲಿ ಎಲ್ಲರೂ ಸರಿ ಸಮಾನರಾಗಿ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಪ್ರಗತಿ ಸಾಧಿಸುವ ಅವಕಾಶ ನಿರ್ಮಾಣವಾಗಿದೆ. ಧರ್ಮಾಚರಣೆ ವಯಕ್ತಿಕವಾದದ್ದು, ಎಲ್ಲರೂ ಅವರವರ ಧರ್ಮವನ್ನು ಪ್ರೀತಿಸಬೇಕು ಆದರೆ ವ್ಯಾವಹಾರಿಕ ಸಂದರ್ಭಗಳಲ್ಲಿ ಎಲ್ಲಾ ಜಾತಿ‌, ಮತ. ಬೇಧವಿಲ್ಲದೆ ಬೆರೆಯಬೇಕಾಗುತ್ತದೆ. ಧರ್ಮದ ಮರ್ಮವಿರುವುದು ಆಚರಣೆಯಲ್ಲಿ ಆದ್ದರಿಂದಲೇ ‘ಸತ್ಯಂ ವದ ಧರ್ಮಂ ಚರ’ ಎಂದು ಉಪನಿಷತ್ತಿನಲ್ಲಿ ಹೇಳಲಾಗಿದೆ. ವಾಸ್ತವಿಕವಾಗಿ ಎಲ್ಲಾ ಧರ್ಮ ಪಂಥಗಳ ಮೂಲ‌ ಉದ್ದೇಶ ಒಂದೇ, ಅದುವೇ ಲೋಕ ಕಲ್ಯಾಣ ಎಂದು ಧರ್ಮಾಧಿಕಾರಿ,‌ ಸರ್ವಧರ್ಮ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ಡಾ.ಡಿ.‌ ವೀರೇಂದ್ರ ಹೆಗ್ಗಡೆಯವರು ‌ನುಡಿದರು.


ಅವರು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದ ಲಕ್ಷ ದೀಪೋತ್ಸವದ ಸಂದರ್ಭ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಹಮ್ಮಿಕೊಂಡಿರುವ ಸರ್ವಧರ್ಮ 88ನೇ ಅಧಿವೇಶನದ ಸ್ವಾಗತ ಭಾಷಣ ಮಾಡಿದರು.
ಹೊರಗಿನಿಂದ ನಾವು ಬೇರೆ ಬೇರೆ ಜಾತಿ, ಧರ್ಮ, ಅಂತಸ್ತಿನವರು ಆಗಿರಬಹುದು. ಅದನ್ನು ಮೀರಿ ನಮ್ಮ ಒಳಗಡೆ ಇರುವ ಜೀವಾತ್ಮನನ್ನು ಅವನ ಶ್ರೇಷ್ಠತೆಯನ್ನು ಮನಗಂಡು ವ್ಯವಹರಿಸಬೇಕು‌. ಹೃದಯ ವೈಶಾಲ್ಯ ಬೆಳೆಸಿಕೊಳ್ಳಬೇಕು ಎಂದರು.

ಸರ್ವಧರ್ಮ ಸಮ್ಮೇಳನದ 88ನೇ ಅಧಿವೇಶನವನ್ನು ವಸತಿ ಸಚಿವ ವಿ.ಸೋಮಣ್ಣ ಉದ್ಘಾಟಿಸಿದರು.
ಧರ್ಮಾಧಿಕಾರಿ,‌ ಸರ್ವಧರ್ಮ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ಡಾ.ಡಿ.‌ ವೀರೇಂದ್ರ ಹೆಗ್ಗಡೆಯವರು ಸರ್ವಧರ್ಮ 88ನೇ ಅಧಿವೇಶನದ ಸ್ವಾಗತ ಭಾಷಣ ಮಾಡಿದರು.
ಕನಕಗಿರಿ ಜೈನ ಮಠದ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಅಧ್ಯಕ್ಷತೆ ವಹಿಸಿದರು.


ಖ್ಯಾತ ಕಥೆಗಾರ ಬೆಂಗಳೂರಿನ ಕೇಶವ ಮಳಗಿ, ಉಡುಪಿ ಧರ್ಮಪ್ರಾಂತ್ಯದ ಸಾ.ಸಂಪರ್ಕ ಅಧಿಕಾರಿ ರೆ.ಫಾ.ಚೇತನ್ ಲೋಬೋ ಉಪನ್ಯಾಸ ನೀಡಲಿದ್ದಾರೆ.
ವೇದಿಕೆಯಲ್ಲಿ ಹೆಗ್ಗಡೆಯವರ ಪತ್ನಿ ‌ಹೇಮಾವತಿ‌ ವೀ. ಹೆಗ್ಗಡೆ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ‌ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್, ಸಚಿವ ವಿ. ಸೋಮಣ್ಣ ಅವರ ಪತ್ನಿ ‌ಶೈಲಜಾ ಉಪಸ್ಥಿತರಿದ್ದರು.


ಸಭಾ ಕಾರ್ಯಕ್ರಮ ಆರಂಭಕ್ಕೂ ಮುನ್ನ ಅತಿಥಿ‌ ಗಣ್ಯರನ್ನು‌ ಮೆರವಣಿಗೆ ಮೂಲಕ‌ ಸಭಾಭವನಕ್ಕೆ ಕರೆತರಲಾಯಿತು. ಆರಂಭದಲ್ಲಿ ವೈಷ್ಣವ ಜನತೋ ಹಾಡಿನ ಕನ್ನಡಾನುವಾದ ಪರಹಿತ ಬಯಸೋ ಮನದ ಒಳಗೆ ಹಾಡು ಹಾಡಿದ್ದು ವಿಶೇಷವಾಗಿತ್ತು.

ಸಚಿವರನ್ನು ಹಾಗೂ ಸ್ವಾಮೀಜಿಯವರನ್ನು ಡಾ. ಹೆಗ್ಗಡೆಯವರು ಕ್ಷೇತ್ರದ ಪರವಾಗಿ ಗೌರವಿಸಿದರು.

ಉಪನ್ಯಾಸಕರನ್ನು ಧರ್ಮಸ್ಥಳದ ಡಿ.ಸುರೇಂದ್ರ ಕುಮಾರ್ ಗೌರವಿಸಿದರು.

 

ಕಥೆಗಾರ, ಚಿಂತಕ ಬೆಂಗಳೂರಿನ ಕೇಶವ ಮಳಗಿ ಮತ್ತು ಉಡುಪಿ ಬಿಷಪ್ ಹೌಸ್ ಸಾ.ಸಂಪರ್ಕ‌ಅಧಿಕಾರಿ ರೆ.ಫಾ. ಚೇತನ್ ಲೋಬೋ ಉಪನ್ಯಾಸ ನೀಡಿದರು.‌

ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಹಾಗೂ ಉಪನ್ಯಾಸಕ ಸುನೀಲ್ ಪಂಡಿತ್ ಸನ್ಮಾನ ಪತ್ರ ವಾಚಿಸಿದರು.

ಉಜಿರೆ ಎಸ್ ಡಿ ಎಂ ಕಾಲೇಜಿನ ಉಪನ್ಯಾಸಕ ಡಾ. ಶ್ರೀಧರ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಲಾಯಿಲ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಸುಧೀರ್ ಪ್ರಭು ವಂದಿಸಿದರು.

ಉಜಿರೆ ನ್ಯಾಚುರೋಪತಿ ಕಾಲೇಜಿನ ವಿದ್ಯಾರ್ಥಿನಿಯರಿಂದ ವೈಷ್ಣವ ಜನತೋ ಅನುವಾದ ಹಾಡಿನೊಂದಿಗೆ ಸರ್ವಧರ್ಮ ಸಮ್ಮೇಳನ ಆರಂಭಗೊಂಡಿತು.

error: Content is protected !!