ಜೀರೋ ಟ್ರಾಫಿಕ್ ನೆಪದಲ್ಲಿ ಬೇಕಾಬಿಟ್ಟಿ ವಾಹನ ಚಾಲನೆ: ಪೊಲೀಸ್ ಠಾಣೆಗೆ ದೂರು

 

ಚಿಕ್ಕಮಗಳೂರು: ಜೀರೋ ಟ್ರಾಫಿಕ್ ನೆಪದಲ್ಲಿ ಬೇಕಾಬಿಟ್ಟಿ ವಾಹನ ಚಲಾಯಿಸಿ ಸಂಚಾರಕ್ಕೆ ಹಾಗೂ ಸಾರ್ವಜನಿಕರಿಗೆ ತೊಂದರೆ ಮಾಡಿರುವ ಬಗ್ಗೆ ಕರ್ನಾಟಕ ರಾಷ್ಟ್ರಸಮಿತಿ ಪಕ್ಷದ ಜಿಲ್ಲಾಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಬಣಕಲ್ ಠಾಣೆಗೆ ದೂರು ನೀಡಿದ್ದಾರೆ.

ಯಾವುದೇ ತುರ್ತು ಸಂದರ್ಭ ಇಲ್ಲದೆ ಕೆಲ ಯುವಕರು ಡಿ 2ರಂದು ಜೀರೋ ಟ್ರಾಫಿಕ್ ಮಾಡಿಸಿದ್ದಾರೆ. ಇದಕ್ಕೆ ದ.ಕ ಜಿಲ್ಲೆಯ ಕಾರುಣ್ಯ ನಿಧಿ ಕರ್ನಾಟಕ ಚಾರಿಟೆಬಲ್ ಟ್ರಸ್ಟ್ ಕಾರ್ಯನಿರ್ವಾಹಕರಾದ ಹರ್ಷದ್ ಕೊಪ್ಪ, ನಿಸಾರ್ ನಿಚ್ಚು ಮಂಗಳೂರು, ಜಲೀಲ್ ಮತ್ತಿತರರು ಕಾರಣರಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇವರು ಇತ್ತೀಚೆಗೆ ರೋಗಿಗೆ ತಕ್ಷಣದ ಶಸ್ತ್ರಚಿಕಿತ್ಸೆ ಇದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ‌ಜನರನ್ನು ನಂಬಿಸಿ ಅಂಬುಲೆನ್ಸ್ ಸಂಚರಿಸಲು ಶಿರಾಡಿ ಘಾಟ್ ರಸ್ತೆ ಸಂಚಾರಕ್ಕೆ ಸುಗಮವಾಗಿದ್ದರೂ ಕೂಡ ಪುತ್ತೂರು,ಬೆಳ್ತಂಗಡಿ, ಚಾರ್ಮಾಡಿ, ಕೊಟ್ಟಿಗೆಹಾರ, ಮೂಡಿಗೆರೆ ಹ್ಯಾಂಡ್ ಪೋಸ್ಟ್ ಬೇಲೂರು,ಹಾಸನ ರಸ್ತೆ ಮೂಲಕ ಬೆಂಗಳೂರಿಗೆ ತೆರಳಿದ್ದರು .ಅದರೆ ಆರು ದಿನ ಕಳೆದರೂ ಶಸ್ತ್ರಚಿಕಿತ್ಸೆ ನಡೆದಿಲ್ಲ. ತುರ್ತು ಚಿಕಿತ್ಸೆ ಅಗತ್ಯ ಇಲ್ಲದೆ ಇದ್ದರೂ ತುರ್ತು ಚಿಕಿತ್ಸೆ ಇದೆ ಎಂದು ನಂಬಿಸಿ ಪೊಲೀಸ್ ಅನುಮತಿ ಪಡೆಯದೇ ಜೀರೋ ಟ್ರಾಫಿಕ್ ನಲ್ಲಿ ಕರೆದೊಯ್ಯಲಾಗಿದೆ. ಅದಲ್ಲದೆ ರೋಗಿಯನ್ನು ಕೊಂಡೊಯ್ಯುತ್ತಿದ್ದ ಅಂಬುಲೆನ್ಸ್ ನ ದಾಖಲೆ ಪತ್ರಗಳು ಸರಿಯಾಗಿ ಇಲ್ಲದಿರುವುದು ತಿಳಿದುಬಂದಿದೆ ಎಂದು ಆರೋಪಿಸಿದ್ದು, ತನಿಖೆಗೆ ಒತ್ತಾಯಿಸಿದ್ದಾರೆ.

error: Content is protected !!