ಬೆಳ್ತಂಗಡಿ ನದಿ‌ ಬಳಿ ನಾಪತ್ತೆ ಪ್ರಕರಣ: ಓರ್ವನ ಶವ ನದಿಯಲ್ಲಿ ಪತ್ತೆ

ಬೆಳ್ತಂಗಡಿ: ನಗರ ಪಂಚಾಯತ್ ಪಂಪ್ ಹೌಸ್ ಬಳಿ ಆಗಮಿಸಿ, ವ್ಯಕ್ತಿಗಳಿಬ್ಬರು ನಾಪತ್ತೆಯಾದ ಹಿನ್ನೆಲೆ ಬೆಳ್ತಂಗಡಿ ಸೋಮಾವತಿ ನದಿಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹುಡುಕಾಟ ನಡೆಸಿದ್ದು ಓರ್ವನ‌ ಶವ ಪತ್ತೆಯಾಗಿದೆ. ಮೃತರನ್ನು ಉಜಿರೆ ಶಿವಾಜಿನಗರ ನಿವಾಸಿ ರಮೇಶ್ (48) ಎಂದು‌ ಗುರುತಿಸಲಾಗಿದೆ. ಇವರ ಜೊತೆಯಲ್ಲಿ ಬಂದ ಇನ್ನೋರ್ವ ವ್ಯಕ್ತಿ ಉಜಿರೆಯಲ್ಲಿ ಸುರಕ್ಷಿತವಾಗಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಉಜಿರೆ ಸಮೀಪದ ವ್ಯಕ್ತಿಗಳಿಬ್ಬರು ಡಿ.7ರಂದು ಸಂಜೆ ಸೋಮಾವತಿ‌‌‌ ನದಿ ಸಮೀಪ ಬಂದಿದ್ದು, ಒಬ್ಬರ ಬಟ್ಟೆಬರೆ, ಮೊಬೈಲ್ ನದಿ ದಡದಲ್ಲಿ ಪತ್ತೆಯಾಗಿದ್ದರಿಂದ ಹುಡುಕಾಟ ‌ನಡೆಸಲಾಗಿತ್ತು.

ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬರಬೇಕಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!