ಚಾರ್ಮಾಡಿ ಚೆಕ್ ಪೊಸ್ಟ್ ಬಳಿ, ಗಾಂಜಾ ಸಾಗಾಟ ವಾಹನ ವಶ: ಓರ್ವನ‌ ಸೆರೆ, ಮತ್ತೋರ್ವ ಆರೋಪಿ ನಾಪತ್ತೆ

ಮುಂಡಾಜೆ: ಚಾರ್ಮಾಡಿ ಪೊಲೀಸ್ ಚೆಕ್ ಪೊಸ್ಟ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭ ಉಜಿರೆ ಕಡೆಯಿಂದ ನೊಂದಣಿಯಾಗದ ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ ಗಾಂಜಾವನ್ನು ವಶಪಡಿಸಿಕೊಂಡು, ಓರ್ವ ಆರೋಪಿಯನ್ನು‌ ಬಂಧಿಸಲಾಗಿದೆ. ಇನ್ನೋರ್ವ ಆರೋಪಿ ಪೊಲೀಸರನ್ನು ಗಮನಿಸಿ, ತಲೆಮರೆಸಿಕೊಂಡಿದ್ದಾನೆ.

ಆರೋಪಿ‌ ಚೆಕ್ ಪೋಸ್ಟ್ ಬಳಿ ತನ್ನ ದ್ವಿಚಕ್ರ ವಾಹನದಲ್ಲಿ ಬರುವುದನ್ನು ಗಮನಿಸಿ ವಾಹನವನ್ನು ನಿಲ್ಲಿಸುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಈ ಸಂದರ್ಭ ಆರೋಪಿ ತನ್ನ ದ್ವಿಚಕ್ರ ವಾಹನವನ್ನು ಹಿಂದಕ್ಕೆ ತಿರುಗಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ ಆ ಸಂದರ್ಭ ಪೊಲೀಸರು ಸವಾರ ಕಾಶಿಬೆಟ್ಟು ನಿವಾಸಿ ಮಹಮ್ಮದ್ ನಬಾನ್ ನನ್ನು ಬಂಧಿಸಿದ್ದಾರೆ. ವಾಹನದ ಸಹ ಸವಾರ ಉಜಿರೆ ಗಾಂಧಿನಗರ ನಿವಾಸಿ ಅಬ್ದುಲ್ ನಾಜಿರ್ ನಾಪತ್ತೆಯಾಗಿದ್ದಾನೆ. ಘಟನೆ ಸಂದರ್ಭ ವಾಹನವನ್ನು ಪರಿಶೀಲಿಸಲಿಸಿದಾಗ ಸುಮಾರು 10 ಸಾವಿರ ರೂ. ಮೌಲ್ಯದ 450 ಗ್ರಾಂ. ತೂಕದ ಗಾಂಜ ಗಿಡಗಳ ಎಲೆ ಮೊಗ್ಗುಗಳು, ಬೀಜಗಳು ಲಭಿಸಿದ್ದು, ಸುಮಾರು 50 ಸಾವಿರ ರೂ. ಮೌಲ್ಯದ ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.

ಧರ್ಮಸ್ಥಳ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಪವನ್ ನಾಯಕ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

error: Content is protected !!