ಬೆಳ್ತಂಗಡಿ: ಯುವತಿಯನ್ನು ಶ್ವಾಸಕೋಶದ ತುರ್ತು ಚಿಕಿತ್ಸೆಗಾಗಿ ಕರೆದೊಯ್ದ ಆಂಬ್ಯುಲೆನ್ಸ್ ಪುತ್ತೂರಿನಿಂದ ಬೆಳಗ್ಗೆ 11 ಗಂಟೆ ಸುಮಾರಿಗೆ ಮಹಾವೀರ ಆಸ್ಪತ್ರೆಯಿಂದ ಮಧ್ಯಾಹ್ನ ಸುಮಾರು 3.20ರ ಸುಮಾರಿಗೆ ಬೆಂಗಳೂರಿನ ಮಹದೇವಪುರ ವೈದೇಹಿ ಆಸ್ಪತ್ರೆ ತಲುಪುವ ಮೂಲಕ ಕೇವಲ 4 ಗಂಟೆ 20 ನಿಮಿಷಗಳಲ್ಲಿ ತಲುಪಿದಂತಾಗಿದೆ.
ಶ್ವಾಸಕೋಶದ ತುರ್ತು ಚಿಕಿತ್ಸೆಗೆ ಪುತ್ತೂರು ಮಹಾವೀರ ಆಸ್ಪತ್ರೆಯಿಂದ ಸುಹಾನ ಎಂಬ ಬಡ ಯುವತಿಯನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು.
ಪ್ರಯಾಣ:
ಪುತ್ತೂರಿನಿಂದ ಸುಮಾರು 11 ಗಂಟೆಗೆ ಹೊರಟ ಆಂಬ್ಯುಲೆನ್ಸ್ 11.11ರ ಸುಮಾರಿಗೆ ಉಪ್ಪಿನಂಗಡಿ ದಾಟಿ, 11.20ರ ಸುಮಾರಿಗೆ ಜಾರಿಗೆ ಬೈಲು ದಾಟಿದೆ. 11. 25ರ ಸುಮಾರಿಗೆ ಗುರುವಾಯನಕೆರೆ, 11.27ರ ಸುಮಾರಿಗೆ ಬೆಳ್ತಂಗಡಿ ದಾಟಿದೆ. ಸುಮಾರು 11.33ರ ಸುಮಾರಿಗೆ ಉಜಿರೆಯನ್ನು ದಾಟಿ ಮುಂದುವರಿದು ಸಾಗಿದೆ. 11.43ರ ಸುಮಾರಿಗೆ ಚಾರ್ಮಾಡಿ ಪ್ರದೇಶವನ್ನು ದಾಟಿದೆ.
ಚಿಕ್ಕಮಗಳೂರು ಜಿಲ್ಲೆಯ ಬಣಕಲ್ ಗೆ ಸುಮಾರು 12.30ರ ಸುಮಾರಿಗೆ ಹಾಗೂ ಹಾಸನ ಜಿಲ್ಲೆಯ ಬೇಲೂರನ್ನು 12.50 ಸುಮಾರಿಗೆ ದಾಟಿದೆ. ಹೀಗೆ ಸಾರ್ವಜನಿಕರ ಬೆಂಬಲದೊಂದಿಗೆ 3.20ರ ಸುಮಾರಿಗೆ ಮಹದೇವಪುರದ ವೈದೇಹಿ ಆಸ್ಪತ್ರೆಗೆ ತಲುಪಿಸಲಾಗಿದೆ. ಈ ಮೂಲಕ ಕೇವಲ 4ಗಂಟೆ 20 ನಿಮಿಷಗಳಲ್ಲಿ ಆಂಬ್ಯುಲೆನ್ಸ್ ಬೆಂಗಳೂರು ತಲುಪಿದಂತಾಗಿದೆ. ಬೇಲೂರು, ಹಾಸನ ಮೊದಲಾಗಿ ಜನ ರಸ್ತೆಯ ಇಕ್ಕೆಲಗಳಲ್ಲಿ ನಿಂತು, ಯಾರಿಗೂ ಸಮಸ್ಯೆಯಾಗದ ರೀತಿ ಆಂಬ್ಯುಲೆನ್ಸ್ ಸಾಗಲು ದಾರಿ ಮಾಡಿಕೊಡುತ್ತಿದ್ದ ದೃಶ್ಯ ಕಂಡುಬಂತು.