ಸೀಮೆಯ ಜನರ ಸಹಕಾರದಿಂದ ಅರಮನೆ ಕಾರ್ಯಚಟುವಟಿಕೆ: ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲ ಅಭಿಮತ

ಅಳದಂಗಡಿ: ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಪಟ್ಟಾಭಿಷೇಕ ನಡೆದು 25 ವರ್ಷ ಪೂರ್ಣಗೊಂಡ ಸಂದರ್ಭ ಈ ಹಮ್ಮಿಕೊಂಡಿರುವುದು ಸಂತಸವಾಗಿದೆ. 1995ರಲ್ಲಿ ತಂದೆಯ ನಿಧನದ ಸಂದರ್ಭ ಚಿಕ್ಕ ವಯಸ್ಸಿನಲ್ಲಿ ಪಟ್ಟಾಧಿಕಾರ ವಹಿಸಿಕೊಂಡಾಗ ಹೇಗೆ ಇಂತಹಾ ಮಹತ್ತರ ಜವಾಬ್ದಾರಿ ನಿರ್ವಹಿಸುವುದು ಎಂಬ ಅಂಜಿಕೆಯಿತ್ತು. ಆದರೆ ಸೀಮೆಯ ಜನರ ಸಹಕಾರದೊಂದಿಗೆ 25 ವರ್ಷ ವಿಜೃಂಭಣೆಯೊಂದಿಗೆ ಈ ಅರಮನೆಯ ಕಾರ್ಯಚಟುವಟಿಕೆ ನಡೆಸಲಾಗಿದೆ ಎನ್ನಲು ಸಂತಸವಾಗುತ್ತಿದೆ.

ಸೀಮೆಯ ಹಾಗೂ ಸೀಮೆಯ ಹೊರಗಿನ ಜನತೆ ಸೇರಿಕೊಂಡು ರಜತ ಮಹೋತ್ಸವ ಆಚರಣಾ ಸಮಿತಿ ರಚಿಸಿ ಉತ್ತಮ ರೀತಿಯಲ್ಲಿ ಕಾರ್ಯಕ್ರಮ ಸಂಘಟಿಸಿದ್ದಾರೆ. ಸಮಿತಿಯವರು ಮಾತ್ರವಲ್ಲದೆ, ಸೀಮೆಯ ಎಲ್ಲಾ ಜನಗಳ ಸಹಕಾರದೊಂದಿಗೆ ಅರುವದ ಹೆಸರು ಉಳಿದಿದೆ. ಇವರೆಲ್ಲರ ಸಹಕಾರದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕೆಲವು ಕಟ್ಟು ಕಟ್ಟಳೆಗಳ ಕಾರ್ಯಕ್ರಮಗಳು ಅರಸುಗಳ ಜೊತೆಗೆ ಸೀಮೆಯ ಜನರ ಸಹಕಾರವೂ ಅಗತ್ಯ. ಸೀಮೆಯ ಜನತೆಯ ಸಹಕಾರದೊಂದಿಗೆ ಇನ್ನಷ್ಟು ಕಾರ್ಯಕ್ರಮ ಮಾಡಲು ಉತ್ಸಾಹ ತುಂಬಿದೆ. ಸುಮಾರು 30 ವರ್ಷಗಳ ಹಿಂದೆ, ನನ್ನ ತಂದೆಯವರಿದ್ದ ಕಾಲದಲ್ಲಿ ಧರ್ಮನೇಮ ನಡೆಸಿಕೊಟ್ಟಿದ್ದರು. ಪಟ್ಟಾಧಿಕಾರಿಯಾಗಿ 25 ವರ್ಷಗಳು ಪೂರೈಸಿದ ಹಿನ್ನೆಲೆ ಆ ಧರ್ಮನೇಮ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಪಟ್ಟದ ದೈವಗಳಾದ ಮೂಜಿಲ್ನಾಯ ಹಾಗೂ ಕೊಡಮಣಿತ್ತಾಯ ವಿಜೃಂಭನೆಯಿಂದ ನೇಮ ನಡೆಸಲು ಉದ್ದೇಶಿಸಲಾಗಿದೆ ಎಂದರು.

error: Content is protected !!