ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುಂದರ ದೇವಾಡಿಗರಿಗೆ ಬೆಳ್ತಂಗಡಿ ಪತ್ರಕರ್ತರ ಸಂಘದಿಂದ ಗೌರವಾರ್ಪಣೆ

ಬೆಳ್ತಂಗಡಿ: ಅಳದಂಗಡಿ ಭಾಗದಲ್ಲಿ ವಾದ್ಯ‌ ಕಲಾವಿದರಾಗಿ ದೀರ್ಘಕಾಲ ಕಲಾಸೇವೆಗೈದು ಪ್ರಸ್ತುತ ವರ್ಷ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಸುಂದರ ದೇವಾಡಿಗ ಅಳದಂಗಡಿ ಅವರನ್ನು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಡಿ.1 ರಂದು ಅವರ ನಿವಾಸಕ್ಕೆ ತೆರಳಿ ಗೌರವಾರ್ಪಣೆ ಸಲ್ಲಿಸಲಾಯಿತು.

ಸಂಘದ ಅಧ್ಯಕ್ಷ ಅಶ್ರಫ್ ಆಲಿಕುಂಞಿ ಮುಂಡಾಜೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಗ್ರಾಮಾಂತರ ಕಾರ್ಯದರ್ಶಿ ಭುವನೇಶ್ವರ ಜಿ, ಬೆಳ್ತಂಗಡಿ ಸಂಘದ ಕೋಶಾಧಿಕಾರಿ ಚೈತ್ರೇಶ್ ಇಳಂತಿಲ, ಸದಸ್ಯರಾದ ಆರ್.ಎನ್ ಪೂವಣಿ, ಬಿ.ಎಸ್ ಕುಲಾಲ್, ಆಚುಶ್ರೀ ಬಾಂಗೇರು, ಸಂಜೀವ ಎನ್.ಸಿ, ಪದ್ಮನಾಭ ಕುಲಾಲ್ ವೇಣೂರು, ಗಣೇಶ್ ಶಿರ್ಲಾಲು, ಪ್ರಸಾದ್ ಶೆಟ್ಟಿ ಏಣಿಂಜ ಮೊದಲಾದವರು ಭಾಗವಹಸಿದ್ದರು.
ಸಂಘದ ಕಾರ್ಯದರ್ಶಿ ಮನೋಹರ್ ಬಳಂಜ ಸ್ವಾಗತಿಸಿ ಪ್ರಸ್ತಾವಿಸಿದರು. ಪ್ರಶಸ್ತಿ ಪುರಸ್ಕೃತರ ಪರಿಚಯವನ್ನು ಸಂಘದ ಉಪಾಧ್ಯಕ್ಷ ದೀಪಕ್ ಆಠವಳೆ ನೆರವೇರಿಸಿದರು.
ಈ‌ ಸಂದರ್ಭ ಸನ್ಮಾನಿತರ ಪುತ್ರರಾದ ಉದಯ ದೇವಾಡಿಗ ಮತ್ತು ಗಣೇಶ್ ದೇವಾಡಿಗ ಎಲ್ಲರನ್ನೂ ಬರಮಾಡಿಕೊಂಡು ಸತ್ಕರಿಸಿದರು.

error: Content is protected !!