ಮುಂಡಾಜೆ ಕೊರೊನಾ ಜಾಗೃತಿ ಜಾಥಾ: ಮುನ್ನೆಚ್ಚರಿಕೆ ಸಾರುವ ಬೀದಿನಾಟಕ, ಕೊರೋನಾ ಪರೀಕ್ಷಾ ಶಿಬಿರ

ಮುಂಡಾಜೆ: ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ನಿರ್ದೇಶನದಲ್ಲಿ, ಮುಂಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಮುಂಡಾಜೆ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕೊರೊನಾ ಜಾಗೃತಿ ಜಾಥಾ ಕಾರ್ಯಕ್ರಮ ಸೋಮವಾರ ಸೋಮಂತಡ್ಕದಲ್ಲಿ ಜರಗಿತು.

ತಾಲೂಕು ವೈದ್ಯಾಧಿಕಾರಿ ಡಾ. ಕಲಾಮಧು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ತಾಲೂಕಿನಲ್ಲಿ ಕೊರೊನಾದ ಮೊದಲ ಅಲೆ ಹತೋಟಿಗೆ ಬಂದಿದೆ, ಎರಡನೇ ಅಲೆ ಆರಂಭವಾಗದಂತೆ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.

ಕೊರೊನಾ ಮುನ್ನೆಚ್ಚರಿಕೆ ಸಾರುವ ಬೀದಿನಾಟಕ ಹಾಗೂ ಕೊರೊನಾ ಪರೀಕ್ಷಾ ಶಿಬಿರ ನಡೆಯಿತು.

ಪಂಚಾಯಿತಿ ಕಾರ್ಯದರ್ಶಿ ಸಂಜೀವ ನಾಯ್ಕ, ಮುಂಡಾಜೆ ಸಿಎ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾರಾಯಣ ಫಡ್ಕೆ, ರೋಟರಿ ಸಮುದಾಯ ದಳದ ಅಧ್ಯಕ್ಷೆ ಅಶ್ವಿನಿ ಎ.ಹೆಬ್ಬಾರ್, ಕಾರ್ಯದರ್ಶಿ ವಿಘ್ನೇಶ್ ಪ್ರಭು, ಯಂಗ್ ಚಾಲೆಂಜರ್ಸ್ ಸ್ಪೋರ್ಟ್ಸ್ ಕ್ಲಬ್ ನ ಸಂಚಾಲಕ ನಾಮದೇವ ರಾವ್, ಮುಂಡಾಜೆ ಚರ್ಚಿನ ಧರ್ಮಗುರು ಫಾ. ಸೆಬಾಸ್ಟಿಯನ್, ಮಸೀದಿಯ ಸದಸ್ಯ ಹಮೀದ್, ರಿಕ್ಷಾ ಮಾಲಕರ ಸಂಘದ ಸುರೇಶ್ ಕುಮಾರ್ ಹೆಗ್ಡೆ, ಅನಂತ ಮೆಮೋರಿಯಲ್ ಟ್ರಸ್ಟ್ ನ ಪ್ರಹ್ಲಾದ ಫಡ್ಕೆ, ಮುಂಡಾಜೆ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸೇವಂತಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಮಣ್ಣ ಶೆಟ್ಟಿ, ಉದ್ಯಮಿ ವಿ.ಜೆ.ಅಬ್ರಹಾಂ, ಕಲಾಕುಂಚದ ಜಯರಾಂ ಕೆ., ವಿನ್ಸೆಂಟ್ ವೈಪನಾ ಮೊದಲಾದವರು ಉಪಸ್ಥಿತರಿದ್ದರು.

ಮುಂಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಕಾವ್ಯಾ ವೈಪನಾ ಸ್ವಾಗತಿಸಿದರು. ಕೋವಿಡ್ ಸೋಲ್ಜರ್ ತಂಡದ ಮುಖ್ಯಸ್ಥ ಅಶ್ರಫ್ ಆಲಿಕುಂಞ ವಂದಿಸಿದರು. ತಾಲೂಕು ಸಮುದಾಯ ಆರೋಗ್ಯ ಕೇಂದ್ರದ ಅಜಯ್ ವಂದಿಸಿದರು.

error: Content is protected !!