ನಾವೂರು, ಕೈಕಂಬ: ಹುಡಿ ಎರಚಿ, ಹಲ್ಲೆ ನಡೆಸಿ ₹1.50 ಲಕ್ಷ ದರೋಡೆ

ಬೆಳ್ತಂಗಡಿ: ನಾವೂರು ಗ್ರಾಮದ ಕೈಕಂಬ ‌ಎಂಬಲ್ಲಿ ನ.24ರಂದು ಹುಡಿ ಎರಚಿ 1.50 ಲಕ್ಷ ರೂ. ದೋಚಿದ ಘಟನೆ ನಡೆದಿದೆ.
ನ.24ರಂದು ರಾತ್ರಿ 10.30ಕ್ಕೆ ಬೆಳ್ತಂಗಡಿ ತಾಲೂಕು ನಾವೂರು ಗ್ರಾಮದ ಕೈಕಂಬ ಎಂಬಲ್ಲಿ ಜಿನಸಿ ಅಂಗಡಿ ವ್ಯಾಪಾರ ನಡೆಸುತ್ತಿದ್ದ ಕೃಷ್ಣಪ್ಪ ಗೌಡ ಅವರು ಅಂಗಡಿಗೆ ಬಾಗಿಲು ಹಾಕಿ, ತಮ್ಮ ಸ್ಕೂಟರ್ ಸ್ಟಾರ್ಟ್ ಮಾಡುವ ಸಂದರ್ಭದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಬಿಳಿ ಬಣ್ಣದ ಹುಡಿಯನ್ನು ಮುಖಕ್ಕೆ ಎರಚಿದ್ದಾರೆ. ಬಳಿಕ ಕಬ್ಬಿಣದ ಸರಳಿನಿಂದ ಹಲ್ಲೆ ನಡೆಸಿ ಬ್ಯಾಗ್ ನಲ್ಲಿದ್ದ ನಗದು ಒಟ್ಟು ರೂ. 1.50 ಲಕ್ಷ ರೂ. ಹಣವನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ‌ ತಿಳಿಸಲಾಗಿದೆ.
ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!