ನ.30ರಿಂದ ಡಿ.5ರವರೆಗೆ ವೇಣೂರಿನಲ್ಲಿ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ


ಬೆಳ್ತಂಗಡಿ: ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ಸಹಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲೆ ಇವುಗಳ ಸಹಭಾಗಿತ್ವದಲ್ಲಿ, ವಿವೇಕಾನಂದ ಪಾಲಿಟೆಕ್ನಿಕ್ ಸಹಯೋಗದಲ್ಲಿ ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ, ಇದರ ನೇತೃತ್ವದಲ್ಲಿ 2020 ನೇ ನವೆಂಬರ್ 30 ಸೋಮವಾರದಿಂದ ಡಿಸೆಂಬರ್ 5 ಶನಿವಾರದವರೆಗೆ ಒಂದು ವಾರಗಳ ಕಾಲ 12 ವಿವಿಧ ವೃತ್ತಿ ಸಂಬಂಧಿ ವಿಷಯಗಳ ಕುರಿತು ಉದ್ಯೋಗ ನೈಪುಣ್ಯ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ ಎಂದು .ಸಹಕಾರ ಭಾರತಿ ತಾಲೂಕು ಆದ್ಯಕ್ಷ ಸುಂದರ ಹೆಗ್ಡೆ ಹಾಗೂ ಬೆಳ್ತಂಗಡಿ ಸಹಕಾರ ಭಾರತಿ ಕಾರ್ಯದರ್ಶಿ ರಾಜೇಶ್ ಪೆಂರ್ಬುಡ ತಿಳಿಸಿದರು.


ಅವರು ಬೆಳ್ತಂಗಡಿ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ ಮಾತನಾಡಿದರು. ಈ ತರಬೇತಿ ಶಿಬಿರದ ಪ್ರಧಾನ ಸಂಚಾಲಕರಾಗಿ ಪ್ರತೀಶ್ ಪೂಜಾರಿ ಹೊಸಂಗಡಿ,ನವೀನ್ ಸಾಮಾನಿ, ಸುಧಾಕರ ಭಂಡಾರಿ, ಶಿವ ಭಟ್ ಸಂಚಾಲಕರುಗಳಾಗಿ ಕಾರ್ಯನಿರ್ವಹಿಸುತ್ತಿದ್ದು , ತರಬೇತಿ ಶಿಬಿರವನ್ನು ಯಶಸ್ವಿಯಾಗಿ ಮಾಡುವ ನಿಟ್ಟಿನಲ್ಲಿ ವೇಣೂರು, ನಾರಾವಿ, ಸುಲ್ಕೇರಿಮೊಗ್ರು, ಅಳದಂಗಡಿ ಕೃಷಿ ಪತ್ತಿನ ಸಹಕಾರಿ ಸಂಘಗಳ ಮಾರ್ಗದರ್ಶನದಲ್ಲಿ ವಿವಿಧ ಸಮಿತಿಗಳು ಕಾರ್ಯನಿರ್ವಹಿಸುತ್ತಿವೆ.
ನವೆಂಬರ್ 30 ರಂದು ಬೆಳಗ್ಗೆ 10 ಗಂಟೆಗೆ ವಿದ್ಯೋದಯ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ವೇಣೂರು ವಠಾರದಲ್ಲಿ ತರಬೇತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಪ್ರಭಾಕರ ಭಟ್, ಸಹಕಾರ ಭಾರತಿ, ಗ್ರಾಮ ವಿಕಾಸ ಸಮಿತಿ ಪ್ರಮುಖರು ಭಾಗವಹಿಸಲಿದ್ದಾರೆ. ಡಿ 5 ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಪ್ರಭಾಕರ ಭಟ್, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹಾಗೂ ಸಹಕಾರ ಭಾರತೀಯ ಜಿಲ್ಲಾ ಕಾರ್ಯದರ್ಶಿ ಗ್ರಾಮ ವಿಕಾಸ ಸಮಿತಿಯ ಪ್ರಮುಖರು ಭಾಗವಹಿಸಲಿದ್ದಾರೆ. ಅದಲ್ಲದೆ ಸ್ವ ಉದ್ಯೋಗ ಅನುಕೂಲವಾಗಿಸುವ ನಿಟ್ಟಿನಲ್ಲಿ ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ವತಿಯಿಂದ ವೃತ್ತಿ ತರಬೇತಿ ಪ್ರಮಾಣ ಪತ್ರ ನೀಡಲಾಗುವುದು ಆಸಕ್ತರು ಶಿಬಿರದ ಪ್ರಾರಂಭದ ದಿನ ಬೆಳಗ್ಗಿನವರೆಗೆ ನೋಂದಾವಣೆ ಮಾಡಿಕೊಳ್ಳಲು ಅವಕಾಶವನ್ನು ನೀಡಲಾಗಿದೆ ಎಂದ ಅವರು
ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ತರಬೇತಿ ನಡೆಯಲಿದ್ದು, 16 ವರ್ಷ ಮೇಲ್ಪಟ್ಟ ವಯಸ್ಸಿನ ಶಿಬಿರಾಸಕ್ತರು ನೋಂದಾವಣೆ ಶುಲ್ಕ ರೂ 250 ನೀಡಿ ಸಂಬಂದಿಸಿದ ಮೇಲ್ವಿಚಾರಕರಿಗೆ ಕರೆ ಮಾಡಿ ಮಾಹಿತಿ ನೀಡಬೇಕು.ಎಂದರು. ಪ್ರತೀಶ್ ಪೂಜಾರಿ ವಂದಿಸಿದರು.


ತರಬೇತಿ ವಿಷಯಗಳು: ಫ್ಯಾಶನ್ ಡಿಸೈನಿಂಗ್, ರೋಹಿಣಿ ಪ್ರಕಾಶ್ (9483365043), ಫುಡ್ ಟೆಕ್ನೋಲಜಿ, ಅರವಿಂದ್ ಲಾಯ್ಲ(7899985669), ಸಂಭಾಷಿಣಿ (8105606154), ಫ್ಯಾಬ್ರಿಕೇಶನ್, ರವಿ ಹೆಗ್ಡೆ(8197757425), ಪ್ರಕಾಶ್(7483292906), ಪ್ರತೀನ್ (7411394774), ಕೃಷಿ ಯಂತ್ರೋಪಕರಣ ದುರಸ್ತಿ, ಸಂದೀಪ್ ಹೆಗ್ಡೆ(7899613482), ಆನಂದ್ ಕುಲಾಲ್ (9686108647), ಕೃಷಿ ಮತ್ತು ಕಸಿ ಮಾಹಿತಿ, ಅರುಣ ಹೆಗ್ಡೆ (9449450353), ಸುಶಾಂತ್ ಹೆಗ್ಢ(9844633282), ಜೇನು ಸಾಕಣಿಕೆ, (ದಯಾನಂದ ಗುಂಡೂರಿ(9741932640), ಗ್ರಾಹಕ ಸೇವಾ ಕೇಂದ್ರ, ಸುಧೀರ್ ಭಂಡಾರಿ (9535092844), ದಿನಕರ್ ಕುಲಾಲ್ (9902172791), ವಿದ್ಯುತ್ ಉಪಕರಣಗಳ ದುರಸ್ತಿ, ಗಣೇಶ್ ಲಾಯಿಲ (9741732648),  ನಿರಂಜನ್ (9483576123), ಫ್ಲಂಬಿಂಗ್ ಮತ್ತು ಎಲೆಕ್ಟ್ರಿಷಿಯನ್, ಅಶೋಕ್ (8197203559), ಶಿವಾನಂದ ಪಡಂಗಡಿ(8861514056), ಹೈನುಗಾರಿಕೆ, ರಮೇಶ್ ಹೆಗ್ಡೆ(963998057,7259453176), ಕಿರಣ್ (9606320479), ನವೀನ್ ಕೈದೋಟ್ಟು(9480230379), ಮೊಬೈಲ್ ಮತ್ತು ಸಿಸಿ ಕ್ಯಾಮೆರಾ ಟೆಕ್ನಿಷಿಯನ್, ಪ್ರಣಿತ್ ಅರಂಬೋ(9916044592), ರಬ್ಬರ್ ಟ್ಯಾಪಿಂಗ್, ರಾಮದಾಸ್ (9449200771), ಗಿರೀಶ್ ಕುಲಾಲ್ (9481266342), ಸಂಯೋಜಕರು, ಪ್ರತೀಶ ಪೂಜಾರಿˌ ಹೊಸಂಗಡಿ(9663000241), ಸುಂದರ ಹೆಗ್ಡೆ ಮೂಡುಕೋಡಿ(9449639159,9686279159), ದಿನಕರ ಕುಲಾಲ್(9902172791), ನೇಮಯ್ಯ ಕುಲಾಲ್(9449210373).

error: Content is protected !!