ರುಡ್ ಸೆಟ್ ಸಂಸ್ಥೆಗೆ ಹರ್ಷೇಂದ್ರ ಕುಮಾರ್ ಭೇಟಿ: ಶಿಬಿರಾರ್ಥಿಗಳ ಜೊತೆ ಸಂವಾದ

ಉಜಿರೆ: ರುಡ್‍ಸೆಟ್ ಸಂಸ್ಥೆಗೆ ಎಸ್.ಡಿ.ಎಮ್ ಎಜುಕೇಶನಲ್ ಟ್ರಸ್ಟ್ ಕಾರ್ಯದರ್ಶಿ ಡಿ. ಹರ್ಷೇಂದ್ರಕುಮಾರ್ ಅವರು ಭೇಟಿ ನೀಡಿ ಬ್ಯೂಟಿ ಪಾರ್ಲರ್ ಮತ್ತು ಮೊಟಾರ್ ರಿವೈಂಡಿಂಗ್ ಶಿಬಿರಾರ್ಥಿಗಳ ಜೊತೆ ಸಂವಾದ ನಡೆಸಿ ತರಬೇತಿಯ ಗುಣಮಟ್ಟದ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರುಡ್‍ಸೆಟ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಎಮ್. ಜನಾರ್ಧನ್, ನಿರ್ದೇಶಕ ಪಡದಯ್ಯ ಹಿರೇಮಠ್, ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್ ಮತ್ತು ಅನಸೂಯ ಉಪಸ್ಥಿತರಿದ್ದರು.

error: Content is protected !!