ಇಂದಬೆಟ್ಟು: ಜಲಜೀವನ ಮಿಷನ್ ಜಾಥಾ

ಇಂದಬೆಟ್ಟು: ಜಲಜೀವನ ಮಿಷನ್, ಜಿಲ್ಲಾ ಪಂಚಾಯತ್, ಗ್ರಾಮೀಣ ಕುಡಿಯುವ ನೀರು ಮತ್ತು ಜಿ.ಪಂ. ನೈರ್ಮಲ್ಯ ವಿಭಾಗ, ತಾಲೂಕು ಪಂಚಾಯತ್ ಬೆಳ್ತಂಗಡಿ, ಗ್ರಾಮ ಪಂಚಾಯತ್ ಇಂದಬೆಟ್ಟು ಸಹಭಾಗಿತ್ವದಲ್ಲಿ ಸಮುದಾಯ ಸಂಸ್ಥೆ ತುಮಕೂರು ಇವರ ಸಂಯೋಜನೆಯಲ್ಲಿ ಜಲ ಜೀವನ್ ಮಿಷನ್ ಇದರ ಶಿಕ್ಷಣ ಮಾಹಿತಿ ಸಂಪರ್ಕ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಯಕ್ರಮ ವಿಭಾಗದ ಜಲಜೀವನ್ ಕಾರ್ಯಕ್ರಮದಡಿ ಜಾಥಾ ನಡೆಯಿತು.

ಸ್ವಸಹಾಯ ಸಂಘಗಳ ಜಾಥ ಕಾರ್ಯಕ್ರಮವನ್ನು ಪಂಚಾಯತ್ ವ್ಯಾಪ್ತಿಯಲ್ಲಿ ಆಯೋಜಿಸಲಾಗಿದ್ದು, ಜಿಲ್ಲಾ ಜಲಜೀವನ್ ಐಇಸಿ ಹೆಚ್ ಆರ್ ಡಿ ವಿಭಾಗದ ಮುಖ್ಯಸ್ಥರಾದ ಶಿವರಾಮ್ ಪಿ. ಬಿ. ಮಾಹಿತಿ ನೀಡಿದರು.

ಪಂ. ಅಭಿವೃದ್ದಿ ಅಧಿಕಾರಿ ಸವಿತಾ ಹಾಗೂ ಪಂ. ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

error: Content is protected !!