ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ಕೂದಲು ಡೊನೇಟ್: ಧ್ರುವ ಸರ್ಜಾರಿಂದ ಸಾಮಾಜಿಕ ಕಳಕಳಿ ಕಾರ್ಯ

ಬೆಂಗಳೂರು: ಧ್ರುವ ಸರ್ಜಾ ತಮ್ಮ ಪೊಗರು ಚಿತ್ರಕ್ಕಾಗಿ ಉದ್ದ ಕೂದಲು ಬಿಟ್ಟಿದ್ದು, ಇದೀಗ ಹೇರ್ ಕಟ್ ಮಾಡಿಸಿಕೊಳ್ಳುವ ಸಂದರ್ಭ ತಮ್ಮ ಕೂದಲನ್ನು ಕ್ಯಾನ್ಸರ್ ಪೀಡಿತ ಮಕ್ಕಳಿಗೆ ವಿಗ್ ಮಾಡಿಸುವ ಸಲುವಾಗಿ ದಾನ ನೀಡುವ ಜೊತೆಗೆ ಈ ರೀತಿ ಕೂದಲು ದಾನ ಮಾಡಿ ಎಂದು ಸಂದೇಶ ಸಾರುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.


15 ವರ್ಷದೊಳಗಿನ ಕೆಲ ಮಕ್ಕಳು ಕ್ಯಾನ್ಸರ್ ಪೀಡಿತರಾದ ಸಂದರ್ಭ ಚಿಕಿತ್ಸೆ ನೀಡಬೇಕಾಗುತ್ತದೆ. ಚಿಕಿತ್ಸೆ ಸಂದರ್ಭ ಕಿಮೋ ಥೆರಪಿ ಮಾಡಿದಾಗ ಕೂದಲು ಉದುರುತ್ತದೆ. ಆದ್ದರಿಂದ ಇಂತಹಾ ಮಕ್ಕಳಿಗೆ ವಿಗ್ ತಯಾರಿಸಲು 10 ಇಂಚಿಗಿಂತ ಹೆಚ್ಚಾಗಿರುವ ಕೂದಲು ಬಳಸಲಾಗುತ್ತದೆ. ಇಷ್ಟು ಉದ್ದದ ಕೂದಲು ಡೊನೇಟ್ ಮಾಡಿದಲ್ಲಿ ಮಕ್ಕಳಿಗೂ ಸಹಾಯವಾಗುತ್ತದೆ, ಜೊತೆಗೆ ಮಕ್ಕಳಿಗೆ ಮಾನಸಿಕ ಸ್ಥೈರ್ಯ ತುಂಬುವ ಜೊತೆಗೆ ಸಮಾಜದಲ್ಲಿ ಅರಿವು ಮೂಡಿಸಿದಂತಾಗುತ್ತದೆ ಎಂಬ ಸಂದೇಶವನ್ನು ದ್ರುವ ಸರ್ಜಾ ತಮ್ಮ ವಿಡಿಯೋ ಮೂಲಕ ತಿಳಿಸಿದ್ದಾರೆ.

ಸಾರ್ವಜನಿಕರು ಹಾಗೂ ಅಭಿಮಾನಿಗಳು ಹೇರ್ ಕಟ್ ಮಾಡುವ ಸಂದರ್ಭ ಇದೇ ರೀತಿ ಮಾಡಿದರೆ ತುಂಬಾ ಜನರಿಗೆ ಸಹಾಯವಾಗುತ್ತೆ ಎಂದು ಸಂದೇಶವನ್ನೂ ಸಮಾಜಕ್ಕೆ ತಿಳಿಸಿದ್ದಾರೆ. ಸಧ್ಯ ಧ್ರುವ ಸರ್ಜಾ ಅವರು ಅಪೊಗರು ಚಿತ್ರೀಕರಣ ಮುಗಿಸಿದ್ದು, ದುಬಾರಿ ಚಿತ್ರದ ಮುಹೂರ್ತ ನಡೆಸಿದ್ದಾರೆ, ಮುಂದೆ ದುಬಾರಿ ಶೂಟಿಂಗ್‍ನಲ್ಲಿ ಬ್ಯೂಸಿಯಾಗಲಿದ್ದಾರೆ.

ಇವರ ಈ ಮಾನವೀಯ ಸಂದೇಶ ಜನ ಮೆಚ್ಚುಗೆಗೆ ಪಾತ್ರವಾಗಿದೆ.

error: Content is protected !!