ಬಂದಾರು: ಸಾಮೂಹಿಕ ದೀಪಾವಳಿ, ಗೋ ಪೂಜೆ

ಬಂದಾರು: ಶ್ರೀ ರಾಮ ನಗರದ ಜೈ ಶ್ರೀರಾಮ್ ಗೆಳೆಯರ ಬಳಗದಿಂದ 16.11.2020 ರಂದು ಸಂಜೆ ಸಾಮೂಹಿಕ ದೀಪಾವಳಿ ಆಚರಣೆ ನಡೆಯಿತು.

   

ಹಬ್ಬದ ಅಂಗವಾಗಿ ಧರ್ಮಶ್ರೀ ಕುಂಭ ಭವನದಲ್ಲಿ ಗೋ ಪೂಜೆ, ಲಕ್ಷ್ಮೀ ಪೂಜೆ, ಭಜನೆ ಮತ್ತು ಧರ್ಮ ಸಂತ್ಸಂಗ ನಡೆಯಿತು.
ಗೆಳೆಯರ ಬಳಗದ ಸ್ಥಾಪಕಾಧ್ಯಕ್ಷ ಉದಯ ಬಿ.ಕೆ., ಅಧ್ಯಕ್ಷ ಕುಶಾಲಪ್ಪ, ಕಾರ್ಯದರ್ಶಿ ಶ್ರೀಧರ್ ಬಿ.ಕೆ. ಹಾಗೂ ಪಾಂಚಜನ್ಯ ಗೆಳೆಯರ ಬಳಗದ ಅಧ್ಯಕ್ಷರು, ಕಾರ್ಯದರ್ಶಿಗಳು, ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಭಜನಾ ಮಂಡಳಿ ಸದಸ್ಯರು ಹಾಗು ಗ್ರಾಮದ ಹಿರಿಯರು ಉಪಸ್ಥಿತರಿದ್ದರು.

error: Content is protected !!