ಮಹಿಳಾ ಸಬಲೀಕರಣ, ಬ್ಯಾಂಕಿಂಗ್ ವ್ಯವಹಾರ ಕುರಿತು ಮಾಹಿತಿ

ಶಿರ್ಲಾಲು: ಮಹಿಳಾ ಸಬಲೀಕರಣ ಹಾಗೂ ಬ್ಯಾಂಕಿಂಗ್ ವ್ಯವಹಾರ ಕುರಿತು ಶಿರ್ಲಾಲು ಗ್ರಾ.ಪಂ. ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕರಾದ ಉಷಾ ಕಾಮತ್ ಅವರು ಮಾಹಿತಿ ನೀಡಿದರು.

ಸಂಜೀವಿನಿ ಒಕ್ಕೂಟದ ರೂಪರೇಶೆಗಳ ಬಗ್ಗೆ ಹಾಗೂ ಜಿ.ಪಿ.ಡಿ.ಪಿ., ಗ್ರಾಮ ಸಭೆ ಮಹತ್ವದ ಕುರಿತು ತಾಲೂಕು ಸಂಯೋಜಕ ಜಯನಂದ ತಿಳಿಸಿದರು. ಪಿ.ಡಿ.ಒ. ರಾಜು ಅವರು ಪ್ರಸ್ತಾವಿಕಾವಾಗಿ ಮಾತಾಡಿದರು.

ಆಡಳಿತಾಧಿಕಾರಿ ಮಹಾವೀರ ಅರಿಗ ಮಾತನಾಡಿ, ಯಾವುದೇ ಗ್ರಾಮದ ಅಭಿವೃದ್ಧಿ ಮಾಡುವಾಗ ಗ್ರಾಮಸ್ಥರ ಸಹಕಾರ ಅವಶ್ಯ. ಇಂತಹಾ ಸಭೆಗಳಲ್ಲಿ ಗ್ರಾಮಸ್ಥರು ಹೆಚ್ಚು ಭಾಗವಹಿಸಿದಲ್ಲಿ ಗ್ರಾಮದ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ತಿಳಿಸಿದರು.
ತಾ.ಪಂ.‌ಸದಸ್ಯೆ ಜಯಶೀಲಾಗೌಡ, ಮಹಿಳಾ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಗುಣಮ್ಮ ಪಿ. ಜೈನ್, ಶಿರ್ಲಾಲು ಮತ್ತು ಕರಂಬಾರು ಶಾಲಾ ಮುಖ್ಯ ಶಿಕ್ಷಕರು, ಗ್ರಾಮ ಪಂಚಾಯತ್ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಎನ್.ಬಿ.ಕೆ., ಎಲ್.ಸಿ.ಆರ್.ಪಿ.ಗಳು, ಸ್ತ್ರೀ ಶಕ್ತಿ ಸಂಘದ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು.

error: Content is protected !!