
ಸುಳ್ಯ: ದಕ್ಷಿಣ ಕನ್ನಡ ಜಿಲ್ಲಾ ವಕೀಲರ ಸಂಘ (ರಿ.) ಇದರ ವಿಶೇಷ ಸಭೆಯು ಸುಳ್ಯ ವಕೀಲರ ಭವನದಲ್ಲಿ ಜಿಲ್ಲಾ ಅಧ್ಯಕ್ಷ ರಿಚರ್ಡ್ ಡಿ. ಕೊಸ್ತಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಸಂಚಾರಿ ಹೈಕೋರ್ಟ್ ಪೀಠದ ಮುಂದಿನ ರೂಪುರೇಷೆಗಳ ಕುರಿತು ವಿಸ್ತೃತ ಚರ್ಚೆ ನಡೆಯಿತು. ವಕೀಲರ ಶ್ರೇಯೋಭಿವೃದ್ಧಿಗಾಗಿ ಸೊಸೈಟಿಯೊಂದನ್ನು ರಚಿಸುವ ಕುರಿತು ಹಾಗೂ ಜಿಲ್ಲೆಯ ವಿವಿಧ ವಕೀಲರ ಸಂಘಗಳ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆಯೂ ಸಮಾಲೋಚನೆ ನಡೆಸಲಾಯಿತು. ಇದರೊಂದಿಗೆ ವಕೀಲರ ಹಿತಾಸಕ್ತಿ ಮತ್ತು ಸಂಘದ ಮುಂದಿನ ಕಾರ್ಯಚಟುವಟಿಕೆಗಳಿಗೆ ಸಂಬಂಧಿಸಿದ ಇತರ ಪ್ರಮುಖ ವಿಷಯಗಳನ್ನೂ ಚರ್ಚಿಸಲಾಯಿತು.
ಸಭೆಯಲ್ಲಿ ಮಂಗಳೂರು ನಿಕಟಪೂರ್ವ ಅಧ್ಯಕ್ಷ ರಾಘವೇಂದ್ರ ಹೆಚ್.ವಿ., ಸುಳ್ಯ ಅಧ್ಯಕ್ಷ ಸುಕುಮಾರ್ ಕುರ್ತುಕುಳಿ, ಮೂಡಬಿದ್ರೆ ನಿಕಟಪೂರ್ವ ಅಧ್ಯಕ್ಷ ಹರೀಶ್, ಜಗನ್ನಾಥ ರೈ, ದಯಾನಂದ್, ಬೆಳ್ತಂಗಡಿ ನಿಕಟಪೂರ್ವ ಕಾರ್ಯದರ್ಶಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಜೊತೆ ಕಾರ್ಯದರ್ಶಿ ನವೀನ್ ಬಿ.ಕೆ., ಸದಸ್ಯರಾದ ಮನೋಹರ್ ಕುಮಾರ್ ಎ., ಶ್ರೀನಿವಾಸ ಗೌಡ ಬೆಳಾಲು ಹಾಗೂ ನರೇಂದ್ರ ಬಂಟ್ವಾಳ ಉಪಸ್ಥಿತರಿದ್ದರು.