’ಯಾರಾಗುವಿರಿ ಆರೋಗ್ಯ ರಕ್ಷಕರು’ ಆನ್‌ಲೈನ್ ಪರೀಕ್ಷೆ: 2ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಅವಕಾಶ: ನಗದು ಬಹುಮಾನ

ಧರ್ಮಸ್ಥಳ: ಅಂತಾರಾಷ್ಟ್ರೀಯ ನ್ಯಾಚುರೋಪತಿ ಸಂಸ್ಥೆಯಿಂದ ನ. 18 ರಂದು ಅಂತಾರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನವಾಗಿದ್ದು ಈ ಕಾರ್ಯಕ್ರಮದ ಪ್ರಯುಕ್ತ 2ನೇ ತರಗತಿಯಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಯಾರಾಗುವಿರಿ ಆರೋಗ್ಯ ರಕ್ಷಕರು ಎಂಬ ವಿಷಯದ ಮೇಲೆ ಆನ್‌ಲೈನ್‌ನಲ್ಲಿ ಪರೀಕ್ಷೆ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ರಾಜ್ಯದ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಳ್ಳಬಹುದು,
ಪರೀಕ್ಷೆಯಲ್ಲಿ ಭಾಗವಹಿಸಲು ಇಚ್ಛಿಸುವವರು www.kbsrexam.inosurya.com ಆನ್‌ಲೈನ್ ಮೂಲಕ ಈ ವೆಬ್‌ಸೈಟ್‌ನಲ್ಲಿ ನವೆಂಬರ್ 10ರೊಳಗೆ ನೋಂದಾವಣೆ ಮಾಡಬೇಕು. ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪ್ರಶಸ್ತಿ ಜೊತೆಗೆ ರೂ. 5100., ದ್ವಿತೀಯ ಸ್ಥಾನ ಪ್ರಶಸ್ತಿ ಜೊತೆಗೆ ರೂ. 3100., ತೃತೀಯ ಸ್ಥಾನ ಜೊತೆಗೆ ರೂ. 2100 ಹಾಗೂ ಆಯಾ ರಾಜ್ಯಗಳಿಗೆ ಪ್ರತ್ಯೇಕವಾಗಿ ಮೊದಲ ಸ್ಥಾನ ಬಂದವರಿಗೆ ರೂ. 1100 ಬಹುಮಾನ ಕೊಡಲಾಗುತ್ತದೆ. ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರ ನೀಡಲಾಗುತ್ತದೆ ಎಂದು ಸಂಸ್ಥೆಯ ಕರ್ನಾಟಕ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ಶಾಂತಿವನ ಟ್ರಸ್ಟ್‌ನ ಯೋಗ ನಿರ್ದೇಶಕ ಡಾ. ಐ. ಶಶಿಕಾಂತ್ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!