ಅಡಿಕೆ ಬೆಳೆಗಾರರೇ ಎಚ್ಚರ: ಕಳ್ಳರಿಂದ ಮುಂಜಾಗ್ರತೆ ವಹಿಸಿ: ಬೆಳ್ತಂಗಡಿ ಪೊಲೀಸ್ ಠಾಣೆಯ ಪ್ರಕಟಣೆ

ಬೆಳ್ತಂಗಡಿ: ಅಡಿಕೆ‌ ಧಾರಣೆ ದಿನದಿಂದ ದಿನಕ್ಕೆ ಏರುತ್ತಿದ್ದು, ಅಡಿಕೆ ಬೆಳೆಗಾರರು ಹಾಗೂ ಮಾರಾಟಗಾರು ಎಚ್ಚರ ವಹಿಸಬೇಕು ಹಾಗೂ ಸೂಚನೆಗಳನ್ನು ಪಾಲಿಸಬೇಕು ಎಂದು ಬೆಳ್ತಂಗಡಿ ಪೊಲೀಸ್ ಠಾಣೆಯಿಂದ ಪ್ರಕಟಣೆ ಹೊರಡಿಸಲಾಗಿದೆ.
ಪೊಲೀಸ್ ಇಲಾಖೆಯಿಂದ ಎಚ್ಚರ ವಹಿಸುವಂತೆ ಕೋರಲಾಗಿದ್ದು, ಈ ಮೂಲಕ‌ ಸಮಾಜದಲ್ಲಿ‌ ಅರಿವು ಮೂಡಿಸುವ ಕಾರ್ಯದ ಮೂಲಕ ಬೆಳ್ತಂಗಡಿ ಪೊಲೀಸ್ ಠಾಣೆಯಿಂದ ಬೆಳೆಗಾರರು ಹಾಗೂ ವ್ಯಾಪಾರಿಗಳಿಗೆ ಎಚ್ಚರ ವಹಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಡಿಕೆ ಬೆಲೆ ದುಬಾರಿಯಾಗಿದ್ದು, ಪ್ರಸ್ತುತ ದಿನಗಳಲ್ಲಿ ಅಮೂಲ್ಯ ವಸ್ತುವಾಗಿದ್ದು, ಗಮನವಹಿಸಿ ಕಾಪಾಡಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ. ಅಡಿಕೆ ಬೆಳೆಗಾರರು ಅಡಿಕೆ ಒಣಗಿಸಲು ಮನೆ ಅಂಗಳದಲ್ಲಿ ಹಾಕಿದ ಸಮಯ ಅದರ ರಕ್ಷಣೆ ಮಾಡಲು ಸಿಸಿ ಕ್ಯಾಮಾರಾ ಅಥವಾ ಒಬ್ಬ ವ್ಯಕ್ತಿಯನ್ನು ಅಡಿಕೆ ಬೆಳೆಯನ್ನು ಕಾಯಲು ನೇಮಿಸುವುದು.
ಅಡಿಕೆ ಬೆಳೆ ಕಾಯುವ ಸಮಯ ಅನುಮಾನಾಸ್ಪದ ವಾಹನ ಅಥವಾ ವ್ಯಕ್ತಿ ಕಂಡು ಬಂದಲ್ಲಿ ತಕ್ಷಣ ಠಾಣೆಗೆ ಕರೆಮಾಡಿ ತಿಳಿಸುವುದು.


ಅಡಿಕೆ ವ್ಯಾಪಾರಸ್ಥರು ಅಡಿಕೆಯನ್ನು ಮಾರಾಟ ಮಾಡಲು ಬಂದ ವ್ಯಕ್ತಿ ಅಡಿಕೆ ಬೆಳೆಗಾರನೊ ಅಲ್ಲವೋ ಎಂಬುದನ್ನು ಖಚಿತ ಪಡಿಸಿಕೊಂಡು ಪಡೆಯುವುದು.ಇಲ್ಲದಿದ್ದಲ್ಲಿ ಕಾನೂನು ಕ್ರಮಕ್ಕೆ ಒಳಗಾಗಬಹುದು.
ಅಡಿಕೆ ಒಣಗಿಸಲು ಹಾಕಿದ ಸ್ಥಳಗಳಲ್ಲಿ ರಾತ್ರಿ ಪೂರ್ಣ ಬೆಳಕಿನ ವ್ಯವಸ್ಥೆ ಮಾಡುವುದು.
ಅಡಿಕೆ ಮಾರಲು ಬಂದ ವ್ಯಕ್ತಿಯು ಅಡಿಕೆ ಮಾಲಿಕನೊ/ವ್ಯಾಪಾರಸ್ಥನೊ ಎಂಬುದನ್ನು ಖಾತ್ರಿ ಪಡಿಸಿಕೊಂಡು ಅಡಿಕೆಯನ್ನು ಮಾರಾಟಗಾರನಿಂದ ಪಡೆಯುವುದು.
ಅಡಿಕೆ ವ್ಯಾಪಾರಸ್ಥರು ತಮ್ಮ ಅಡಿಕೆ ಅಂಗಡಿಯ ಒಳಗೆ ಮತ್ತು ಹೊರಗೆ ಸಿಸಿ ಕ್ಯಾಮಾರಾ ಹಾಕುವುದು.
ಅಡಿಕೆ ಮಾರಲು ಬಂದ ವ್ಯಕ್ತಿಯು ಸ್ಥಳೀಯ ಬೆಳ್ತಂಗಡಿ ವ್ಯಾಪ್ತಿಯವನು ಅಲ್ಲವೆಂಬುದು ಕಂಡು ಬಂದಲ್ಲಿ ಅವನಿಂದ ಅಡಿಕೆ ಪಡೆಯುವ ಮುಂಚೆ ಅವನ ಪೂರ್ಣ ಮಾಹಿತಿ ಪಡೆದು ನಂತರದಲ್ಲಿ ಅವನಿಂದ ಅಡಿಕೆ ಪಡೆಯುವುದು.
ಅಡಿಕೆಗೆ ಒಳ್ಳೆಯ ಬೆಲೆ ಇರುವುದರಿಂದ ಸೂಕ್ತ ರಕ್ಷಣೆ ಮಾಡುವುದರ ಮೂಲಕ ಕಾಪಾಡಿಕೊಳ್ಳುವುದು. ಹಾಗೂ ಅಡಿಕೆ ಕಳ್ಳರ ಬಗ್ಗೆ ಎಚ್ಚರ ವಹಿಸುವುದು.
ಅಡಿಕೆ ವ್ಯಾಪಾರಸ್ಥರು ಯಾರೋ ಅಪರಿಚಿತ ವ್ಯಕ್ತಿ ಕಡಿಮೆ ಬೆಲೆಗೆ ಅಡಿಕೆ ಮಾರಾಟ ಮಾಡುವುದು ತಿಳಿದು ಅವನಿಂದ ಅಡಿಕೆಯನ್ನು ತೆಗೆದುಕೊಂಡಲ್ಲಿ, ಮುಂದೆ ಅದು ಕಳ್ಳತನ ಮಾಡಿದ ಅಡಿಕೆಯಾದಲ್ಲಿ ಕಾನೂನು ಕ್ರಮಕ್ಕೆ ಒಳಗಾಗಬೆಕಾಗುತ್ತದೆ.
ಈ ಮೇಲಿನ ಸೂಚನೆಗಳನ್ನು ಎಲ್ಲಾ ಅಡಿಕೆ ಬೆಳೆಗಾರರು ಹಾಗೂ ಮಾರಾಟಗಾರರು ತಪ್ಪದೆ ಪಾಲಿಸಬೇಕು ಎಂಬುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಕಟಣೆ ಕುರಿತು ಪ್ರಜಾಪ್ರಕಾಶ ಜೊತೆ ಮಾತನಾಡಿದ ಬೆಳ್ತಂಗಡಿ ಠಾಣೆ ಉಪನಿರೀಕ್ಷಕ ನಂದಕುಮಾರ್, “ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ಕೃಷಿಕರು ಆದಷ್ಟು ಜಾಗ್ರತೆ ವಹಿಸುವುದು ಉತ್ತಮ. ಪ್ರಕಟಣೆಯಲ್ಲಿ‌‌ ತಿಳಿಸಿದ ಅಂಶಗಳನ್ನು ‌ಪಾಲಿಸಿದಲ್ಲಿ ಸಂಭಾವ್ಯ ಸಮಸ್ಯೆಗಳಿಂದ ದೂರವಿರಬಹುದು” ಎಂದು ತಿಳಿಸಿದ್ದಾರೆ.

error: Content is protected !!