ಕಾಜೂರು ದರ್ಗಾಶರೀಫ್‌ನಲ್ಲಿ ಸ್ವಲಾತ್: ಪ್ರವೇಶ ದ್ವಾರ ಉದ್ಘಾಟನೆ: ಸರಳ ವಿವಾಹ

ಬೆಳ್ತಂಗಡಿ: ಇತಿಹಾಸ ಪ್ರಸಿದ್ಧ ಸರ್ವ ಧರ್ಮೀಯರ ಸೌಹಾರ್ದ ಕ್ಷೇತ್ರ ಕಾಜೂರು ರಹ್ಮಾನಿಯಾ ಜುಮ್ಮಾ ಮಸ್ಜಿದ್ ಮತ್ತು ದರ್ಗಾ/ಶರೀಫ್‌ನಲ್ಲಿ ಸ್ವಲಾತ್ ಕಾರ್ಯಕ್ರಮ, ಬುರ್ದಾ ಮಜ್ಲಿಸ್, ಎರಡು ಜೊತೆ ಸರಳ ವಿವಾಹ ಹಾಗೂ ನೂತನ ಆವರಣಗೋಡೆ ಮತ್ತು ಪ್ರವೇಶ ದ್ವಾರದ ಉದ್ಘಾಟನೆ ನಡೆಯಿತು.
ಸಯ್ಯಿದ್ ಕಾಜೂರು ತಂಙಳ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದು, ಪ್ರವೇಶ ದ್ವಾರವನ್ನು ಉದ್ಘಾಟಿಸಿ, ಶುಭ ಹಾರೈಸಿದರು. ಮಸೂದ್ ಸಅದಿ ಪದ್ಮುಂಜ ನೇತೃತ್ವದಲ್ಲಿ ಬುರ್ದಾ ಆಲಾಪನೆ ನಡೆಯಿತು. ಸದರ್ ಉಸ್ತಾದ್ ರಶೀದ್ ಮದನಿ ಸಹಿತ ಅಧ್ಯಾಪಕ ವೃಂದದವರು, ರಹ್ಮಾನಿಯಾ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ನಾಸಿರ್ ಮಾಸ್ಟರ್ ಮೊದಲಾದವರು ಸಹಕರಿಸಿದರು.
ಕಾಜೂರು ಮುದರ್ರಿಸ್ ಕೆ.ಹೆಚ್ ಸಿರಾಜುದ್ದೀನ್ ಝುಹುರಿ, ಮಾಜಿ ಅಧ್ಯಕ್ಷರಾದ ಕೆ.ಯು ಉಮರ್ ಸಖಾಫಿ, ಕೆ.ಶೇಖಬ್ಬ ಕುಕ್ಕಾವು, ಬಿ.ಎ.ಯೂಸುಫ್ ಶರೀಫ್, ಮುಹಮ್ಮದ್ ಸಖಾಫಿ ಮತ್ತು ಪಿ.ಎ ಮುಹಮ್ಮದ್, ಕಿಲ್ಲೂರು ಜುಮ್ಮಾ ಮಸ್ಜಿದ್ ಅಧ್ಯಕ್ಷ ಮುಹಮ್ಮದ್ ಕೆ., ಪ್ರಧಾನ ಕಾರ್ಯದರ್ಶಿ ಕಾಸಿಂ ಮಲ್ಲಿಗೆಮನೆ, ಉಪಾಧ್ಯಕ್ಷ ಅಬೂಬಕ್ಕರ್ ಮಲ್ಲಿಗೆಮನೆ, ಇಬ್ರಾಹಿಂ ಮುಸ್ಲಿಯಾರ್, ಮಾಜಿ ಆಡಳಿತಾಧಿಕಾರಿ ಮುಹಮ್ಮದ್ ರಫಿ, ಆಡಳಿತ ಸಮಿತಿ ಉಪಾಧ್ಯಕ್ಷ ಅಬ್ದುಲ್ ರಹಿಮಾನ್, ಕೋಶಾಧಿಕಾರಿ ಕೆ.ಎಮ್.ಕಮಾಲ್, ಮೆನೇಜರ್ ಶಮೀಮ್, ಶರೀಫ್ ಸಖಾಫಿ ದಿಡುಪೆ, ಝಕರಿಯಾ ಮುಸ್ಲಿಯಾರ್ ಕುಕ್ಕಾವು, ಮುಸ್ತಫಾ ಝೈನಿ, ಮುಹಮ್ಮದ್ ಆಲಿ, ಕೆ.ಎಂ.ಅಬೂಬಕ್ಕರ್ ಕುಕ್ಕಾವು, ಹಮೀದ್ ಎನ್.ಎಂ. ಮೊದಲಾದವರು ಉಪಸ್ಥಿತರಿದ್ದರು.
ಕಾಜೂರಿಗೆ ಶಾಶ್ವತ ನೀರಿನ ವ್ಯವಸ್ಥೆ ಕುರಿತು ಮರ್ಕಝ್ ಸಂಸ್ಥೆಗೆ ತಸ್ಲೀಮ್ ಸಖಾಫಿ ಅವರ ಮೂಲಕ ಮನವಿ ಸಲ್ಲಿಸಲಾಯಿತು. ತಸ್ಲೀಮ್ ಸಖಾಫಿ ಮತ್ತು ಗುತ್ತಿಗೆದಾರ ಯಾಕೂಬ್ ಅಜಿಕುರಿ ನಾವೂರು ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಮಸ್ಜಿದ್ ಮುಅದ್ದಿನ್ ಅವರ ಪುತ್ರಿ ಸೇರಿದಂತೆ ಎರಡು ಜೊತೆ ಸರಳ ವಿವಾಹ ನೆರವೇರಿತು. ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸಿದ್ದ ಕಾಜೂರು ಆಡಳಿತ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಸ್ವಾಗತಿಸಿ, ವಿಷಯ ಮಂಡಿಸಿದರು. ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನವಾಝ್ ಕಾರ್ಯಕ್ರಮ ನಿರೂಪಿಸಿದರು. ಕಾಜೂರು ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ವಂದಿಸಿದರು.

error: Content is protected !!