ತಣ್ಣೀರುಪಂಥ ಬಾಲಕಿ‌ ಚಿಕಿತ್ಸೆಗೆ ಸ್ಪಂದಿಸಿದ ‌ಮುಖ್ಯಮಂತ್ರಿ: ವಿಶೇಷ ಪರಿಹಾರದಡಿ 5 ಲಕ್ಷ ರೂ. ಘೋಷಣೆ

ಬೆಳ್ತಂಗಡಿ: ತಾಲೂಕಿನ ತಣ್ಣೀರುಪಂಥ ಗ್ರಾಮದ ಮೂರು ವರ್ಷ ಏಳು ತಿಂಗಳ ಮಗುವಿನ ಚಿಕಿತ್ಸೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಾಸಕ ಹರೀಶ್ ಪೂಂಜ ಅವರ ಮನವಿಗೆ ಸ್ಪಂದಿಸಿ, 5 ಲಕ್ಷ ರೂ.‌ ವಿತರಣೆಗೆ ಆದೇಶ ನೀಡಿದ್ದಾರೆ.
ಬಿಜೆಪಿ ಕಾರ್ಯಕಾರಿಣಿ ಸಭೆ ಅಂಗವಾಗಿ ಮಂಗಳೂರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಆಗಮಿಸಿದ್ದ ಸಂದರ್ಭದಲ್ಲಿ, ಮಗುವಿನ ಸಮೇತ ಭೇಟಿಯಾದ ಶಾಸಕ ಹರೀಶ್ ಪೂಂಜಾ ಅವರು ಸಮಸ್ಯೆ ‌ಕುರಿತು ಮನವರಿಕೆ ಮಾಡಿ ಸಹಾಯ ಕೋರಿದರು.


ತಣ್ಣೀರುಪಂತದ ದೇಸಿನ್ ಕೊಡಿ ರವಿ ಪೂಜಾರಿ ಅವರ ಮೂರು ವರ್ಷ 7 ತಿಂಗಳು ವಯಸ್ಸಿನ ಮಗಳು ಆರಾಧ್ಯ ಅವರು, ಶ್ರವಣದೋಷದಿಂದಾಗಿ ಸಮಸ್ಯೆ ಎದುರಿಸುತ್ತಿದ್ದಳು. ಚಿಕಿತ್ಸೆ ನೀಡಲು ಸುಮಾರು 14 ಲಕ್ಷ ರೂ‌. ವೆಚ್ಚವಾಗುವುದಾಗಿ‌ ವೈದ್ಯರು ತಿಳಿಸಿರುವುದಾಗಿ ಮನವರಿಕೆ‌ ಮಾಡಲಾಯಿತು.‌


ಸಮಸ್ಯೆ ಆಲಿಸಿದ ಮುಖ್ಯಮಂತ್ರಿಗಳು ವಿಶೇಷ ಪ್ರಕರಣವೆಂದು ಪರಿಗಣಿಸಿ, ವೈದ್ಯಕೀಯ ಸೇವೆಗೆ ಪರಿಹಾರ ‌ ನೀಡಲು ಸ್ಥಳದಲ್ಲೇ ಆದೇಶ ನೀಡಿದ್ದಾರೆ.

error: Content is protected !!