ಖಾಸಗಿ ಕಾರಿನಲ್ಲಿ ಬೆಳ್ತಂಗಡಿಗೆ ಆಗಮಿಸಿದ ಸಿ.ಟಿ. ರವಿ: ಕುತೂಹಲ ‌ಮೂಡಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳ‌ ನಡೆ

ಬೆಳ್ತಂಗಡಿ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯ ಕಾಳಜಿ ಫ್ಲಡ್ ರಿಲೀಫ್ ಫಂಡ್‍ನಿಂದ ಸಂತ್ರಸ್ಥರಿಗೆ ಪರಿಹಾರ ವಿತರಣೆ ಹಾಗೂ ಗ್ರಾ.ಪಂ. ಚುನಾವಣೆ ಪೂರ್ವಭಾವಿ ‌ಸಭೆಯಲ್ಲಿ ಭಾಗವಹಿಸಲು ನ.4ರಂದು ಬೆಳ್ತಂಗಡಿ ತಾಲೂಕಿಗೆ ಖಾಸಗಿ ವಾಹನದಲ್ಲಿ ಆಗಮಿಸಿದ್ದರು.


ಕನ್ನಡ ಮತ್ತು ಸಂಸ್ಕತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರಾಗಿ ಸಿ.ಟಿ. ರವಿ. ಅವರು ಕಾರ್ಯನಿರ್ವಹಿಸುತ್ತಿದ್ದರು. ಜೊತೆಗೆ ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿ ಸಚಿವರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಸಿ.ಟಿ.‌ ರವಿ ಅವರು ಜಿಲ್ಲೆ ಹಾಗೂ ರಾಜ್ಯದಲ್ಲಿ‌ ವಿವಿಧ ಹುದ್ದೆಗಳನ್ನು ನಿರ್ವಹಿಸಿದ ಅವರ ಕಾರ್ಯ ದಕ್ಷತೆಯನ್ನು ‌ಗುರುತಿಸಿ ರಾಷ್ಟ್ರಮಟ್ಟದ ‌ಹುದ್ದೆಗೆ ಅವರನ್ನು ‌ನಿಯೋಜಿಸಲಾಗಿತ್ತು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಸ್ವೀಕರಿಸಿದ ಸಿ.ಟಿ. ರವಿ ಅವರು ಕರ್ನಾಟಕ ರಾಜ್ಯ ಸರಕಾರದಲ್ಲಿ ಸಚಿವ ಪದವಿಗೆ‌ ಅ.4ರಂದು ರಾಜಿನಾಮೆ ‌ಸಲ್ಲಿಸಿದ್ದರು. ರಾಜೀನಾಮೆ ಅಂಗೀಕಾರದ ಕುರಿತು ‌ಮಾಹಿತಿ‌‌ ಲಭ್ಯವಾಗಿರಲಿಲ್ಲ. ಆದರೂ ರವಿ ಅವರು ನ.3ರವರೆಗೂ ತಮ್ಮ ಸಚಿವ ಸ್ಥಾನದ ಹೆಸರಿನಲ್ಲಿ, ಸರಕಾರಿ ಕಾರಿನಲ್ಲಿ ಓಡಾಡುತ್ತಿದ್ದರು. ಇದೀಗ ಬೆಳ್ತಂಗಡಿ ತಾಲೂಕಿಗೆ ಖಾಸಗಿ ವಾಹನದಲ್ಲಿ ಆಗಮಿಸಿದ್ದಾರೆ.
ನ.5ರಂದು ಮಂಗಳೂರಿನಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿಯೂ ಭಾಗವಹಿಸಲಿದ್ದಾರೆ. ರಾಷ್ಟ್ರೀಯ ‌ಪ್ರಧಾನ‌ ಕಾರ್ಯದರ್ಶಿಯಾಗಿ ಆಧಿಕಾರ ವಹಿಸಿಕೊಂಡು ದೇಶದ ಉದ್ದಗಲಕ್ಕೂ ‌ಓಡಾಟ ನಡೆಸುತ್ತಿದ್ದಾರೆ. ಸರಕಾರ ಸಚಿವ ಸ್ಥಾನದ ರಾಜೀನಾಮೆ ಅಂಗೀಕರಿಸಿದೆಯೋ ಎಂಬ ಕುತೂಹಲ ಸಾರ್ವಜನಿಕರಲ್ಲಿ ಮೂಡಿದ್ದು, ಸಧ್ಯದಲ್ಲೇ ಈ ಕುತೂಹಲಕ್ಕೆ ತೆರೆ ಬೀಳಲಿದೆ.

error: Content is protected !!