ಕಾಂಗ್ರೆಸ್ ಬೂತ್ ಸಮಿತಿ ಕಾರ್ಯಕರ್ತರ ಐಕ್ಯತಾ ಸಮಾವೇಶ: ಇಂದಿರಾ ಗಾಂಧಿ ಪುಣ್ಯ ಸ್ಮರಣೆ ಉದ್ಘಾಟನೆ

ಬೆಳ್ತಂಗಡಿ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಗ್ರಾಮೀಣ ಬ್ಲಾಕ್ ಘಟಕದ ನೇತೃತ್ವದಲ್ಲಿ ಇಂದಬೆಟ್ಟು ಗ್ರಾಮ ಸಮಿತಿ ವತಿಯಿಂದ ಇಲ್ಲಿನ ಚರ್ಚ್ ಸಭಾಂಗಣದಲ್ಲಿ ಬೂತ್ ಸಮಿತಿ ಕಾರ್ಯಕರ್ತರ ಐಕ್ಯತಾ ಸಮಾವೇಶ ಹಾಗೂ ಇಂದಿರಾ ಗಾಂಧಿ ಪುಣ್ಯ ಸ್ಮರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಮಾಜಿ ಸಚಿವ ಗಂಗಾಧರ ಗೌಡ ಉದ್ಘಾಟಿಸಿದರು.
ಗ್ರಾಮೀಣ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ರಂಜನ್ ಜಿ.ಗೌಡ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೈಲೇಶ್ ಕುಮಾರ್ ಕೆ., ಕೆಪಿಸಿಸಿ ಬೆಳ್ತಂಗಡಿ ಸಂಯೋಜಕ ಕೃಷ್ಣಮೂರ್ತಿ, ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಸಿ. ಮ್ಯಾಥ್ಯೂ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಶೇಖರ ಕುಕ್ಕೇಡಿ, ಧರಣೇಂದ್ರ ಕುಮಾರ್ ಮತ್ತು ನಮಿತಾ ಕೆ., ತಾ.ಪಂ. ಮಾಜಿ ಸದಸ್ಯರಾದ ಮುಕುಂದ ಸುವರ್ಣ, ಪ್ರಶಾಂತ್ ವೇಗಸ್, ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಪ್ರ. ಕಾರ್ಯದರ್ಶಿ ಪ್ರವೀಣ ವಿ.ಜಿ., ನಗರ ಪ್ರ. ಕಾರ್ಯದರ್ಶಿ ದಯಾನಂದ ಬೆಳಾಲು, ಬಂಗಾಡಿ ಸಿಎ ಬ್ಯಾಂಕ್ ಮಾಜಿ ಅಧ್ಯಕ್ಷ ಲಕ್ಷ್ಮಣ ಗೌಡ, ಕಾರ್ಮಿಕ ಘಟಕದ ಮುಖಂಡ ಅಬ್ದುಲ್ ರಹಿಮಾನ್ ಪಡ್ಪು, ಅಲ್ಪಸಂಖ್ಯಾತ ಘಟಕ ತಾಲೂಕು ಅಧ್ಯಕ್ಷ ಅಶ್ರಫ್ ನೆರಿಯ, ಎಪಿಎಂಸಿ ಮಾಜಿ ಅಧ್ಯಕ್ಷ ಭರತ್ ಕುಮಾರ್, ಮಹಿಳಾ ಘಟಕದ ಶೋಭಾ ನಾರಾಯಣ ಗೌಡ, ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಸದಸ್ಯ ಜಗದೀಶ್ ಡಿ.,ಇಂದಬೆಟ್ಟು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಇಬ್ರಾಹಿಂ, ಸದಸ್ಯ ಮಧುಕರ ಸುವರ್ಣ, ಗ್ರಾಮ ಸಮಿತಿ ಅಧ್ಯಕ್ಷ ಕೆ. ಜಯರಾಮ್ ಬಂಗಾಡಿ, ಕಾರ್ಯದರ್ಶಿ ರಾಜೇಶ್ ಪುದುಚೇರಿ, ಸಾಮಾಜಿಕ ಜಾಲತಾಣ ಸಂಚಾಲಕ ಅಬ್ದುಲ್ ಸಮದ್, ಬೂತ್ ಸಮಿತಿ ಅಧ್ಯಕ್ಷರಾದ ವೀರಪ್ಪ ಮೊಯಿಲಿ, ಗಫೂರ್ ಸಾಹೇಬ್, ಇಸ್ಮಾಯಿಲ್, ಜಾನ್ಸನ್ ಸಿ.ವಿ., ಮಾಜಿ ತಾ.ಪಂ ಸದಸ್ಯ ಗಣೇಶ್ ಕಣಾಲು, ಮೊದಲಾದವರು ಉಪಸ್ಥಿತರಿದ್ದರು.

ವಂದೇ ಮಾತರಂ ಮೂಲಕ ಸಭಾ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಬಳಿಕ ಭಾರತ ಮಾತೆ, ಗಾಂಧೀಜಿ ಹಾಗೂ ಇಂದಿರಾಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.

 

ಇದೇ ಸಂದರ್ಭ ರಾಜೇಂದ್ರ ಅವರು ಬಿಜೆಪಿ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಅವರನ್ನು ಗಣ್ಯರು ಪಕ್ಷದ ಧ್ವಜ ನೀಡಿ‌ ಪಕ್ಷಕ್ಕೆ ಸ್ವಾಗತಿಸಿದರು. ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಪ್ರ. ಕಾರ್ಯದರ್ಶಿ ಪ್ರವೀಣ್ ವಿ.ಜಿ. ಪ್ರಸ್ತಾವಿಸಿದರು. ನಾರಾಯಣ ಇಂದಬೆಟ್ಟು ಸ್ವಾಗತಿಸಿದರು. ಚಂದ್ರಶೇಖರ್ ಕಾರ್ಯಕ್ರಮ ನಿರ್ವಹಿಸಿದರು. ಅಬ್ದುಲ್ ಸಮದ್ ಧನ್ಯವಾದವನ್ನಿತ್ತರು.

error: Content is protected !!