ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ಬೆಳ್ತಂಗಡಿ ತಾಲೂಕಿಗೆ 6 ಪ್ರಶಸ್ತಿ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ 2020-21ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದ್ದು, ಬೆಳ್ತಂಗಡಿ ತಾಲೂಕಿಗೆ 6 ಪ್ರಶಸ್ತಿಗಳು ಲಭಿಸಿವೆ.

ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ 2020-21ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಬೆಳ್ತಂಗಡಿ ತಾಲೂಕಿನ ನಾಲ್ಕು ಮಂದಿಗೆ ಹಾಗೂ ಎರಡು ಸಂಸ್ಥೆಗಳಿಗೆ ಸಿಕ್ಕಿರುವುದು ಸಂತಸ ತಂದಿದೆ. ಪ್ರಶಸ್ತಿ ಪುರಸ್ಕೃತರಾಗಿರುವರ ಸಾಧನೆಯನ್ನು ಸರಕಾರ ಗಮನಿಸಿ, ಪ್ರಶಸ್ತಿಯನ್ನು ನೀಡಿದೆ. ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ.

ವಾದ್ಯ ಕಲಾವಿದರಾದ ಸುಂದರ ದೇವಾಡಿಗ ಅಳದಂಗಡಿ,

ವೈದ್ಯಕೀಯ ಸೇವೆಗಾಗಿ ಬಡವರ ಡಾಕ್ಟರ್ ಖ್ಯಾತಿಯ ಡಾ.ವೇಣುಗೋಪಾಲ ಶರ್ಮ ಎಸ್. ಗುರುವಾಯನಕೆರೆ,

ಹಲವಾರು ವರ್ಷಗಳಿಂದ ಪುರಾತನ ದೇವಾಲಯಗಳ, ಐತಿಹಾಸಿಕ ಪುರಾವೆಗಳ ಸಂಶೋಧಕರಾಗಿ, ಹಲವಾರು ಸಂಶೋಧನ ಲೇಖನಗಳನ್ನು ಪ್ರಕಟಿಸಿದ ಎಸ್ ಡಿಎಂ ಕಾಲೇಜಿನ ನಿವೃತ್ತ ಇತಿಹಾಸ ವಿಭಾಗದ ಮುಖ್ಯಸ್ಥ  ಹಾಗೂ ಪ್ರಾಕ್ತನ ಶಾಸ್ತ್ರಜ್ಞ ಡಾ.ವೈ. ಉಮಾನಾಥ ಶೆಣೈ,

ಪತ್ರಿಕೋದ್ಯಮದಲ್ಲಿ ಕಳೆದ ಎರಡು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಪ್ರಸ್ತುತ ವಿಜಯ ಕರ್ನಾಟಕ ದಿನಪತ್ರಿಕೆ ಮಂಗಳೂರು ಆವೃತ್ತಿಯಲ್ಲಿ ಉಪಸಂಪಾದಕರಾಗಿರುವ ಜಿನ್ನಪ್ಪ ಗೌಡ ಬೆಳಾಲುಪ ಪತ್ರಿಕೋದ್ಯಮ ಕ್ಷೇತ್ರದಲ್ಲಿ  ಪ್ರಶಸ್ತಿ ಲಭಿಸಿವೆ.

ಸಮಾಜ ಸೇವೆಗಾಗಿ ವೀರ ಕೇಸರಿ ಧರ್ಮಸ್ಥಳ,

ಕೃಷಿ ಕ್ಷೇತ್ರದಲ್ಲಿ ಬೆಳಾಲು ಕಸ್ತೂರ್ಭ ಸಂಜೀವಿನಿ ಸಂಘ ಪ್ರಶಸ್ತಿಗೆ ಭಾಜನವಾಗಿವೆ.

error: Content is protected !!