ಕಾರಿನೊಳಗೆ ನಾಗರಹಾವು ಪತ್ತೆ: ಸ್ನೇಕ್ ಜೋಯ್ ರಿಂದ ಹಾವಿನ ರಕ್ಷಣೆ

ಬೆಳ್ತಂಗಡಿ: ತಾಲೂಕು ಕೇಂದ್ರದ ಅಮರ್ ಡ್ರಗ್ ಹೌಸ್ ಮುಂಭಾಗ ದಂಪತಿ ಹಾಗೂ ಪುತ್ರ ಕೂತಿದ್ದ ಕಾರಿನಲ್ಲಿ ನಾಗರ ಹಾವು ಪತ್ತೆಯಾಗಿದ್ದು, ಉರಗಪ್ರೇಮಿ ಸ್ನೇಕ್ ಜಾಯ್ ಅವರ ಸುಮಾರು ಒಂದುವರೆ ಗಂಟೆಗಳ ಸತತ ಕಾರ್ಯಾಚರಣೆ ನಡೆಸಿ, ಹಾವನ್ನು ರಕ್ಷಿಸಲಾಯಿತು.
ಸತಾಯಿಸಿ ಸೆರೆಸಿಕ್ಕ ಹಾವನ್ನು ಹಿಡಿದು, ಕಾಡಿಗೆ ಬಿಡುವ ಮೂಲಕ ಸಂಭಾವ್ಯ ಅಪಾಯ ದೂರವಾಗುವ ಜೊತೆಗೆ‌‌ ಪ್ರಕರಣ ಸುಖಾಂತ್ಯಗೊಂಡಿತು.


ಲಾಯಿಲ ಗ್ರಾಮದ ಪುತ್ರಬೈಲು ನಿವಾಸಿಗಳಾದ ಪ್ರವೀಣ್ ಪತ್ನಿ ಮೀನಾ ಮತ್ತು ಮಗ ಕೃತಿಕ್ ಅವರು ಅಮರ್ ಡ್ರಗ್ ಹೌಸ್ ಗೆ ತೆರಳಿದ್ದರು. ವಾಪಸ್ ಬಂದು ಕಾರಿನ‌ ಬಾಗಿಲು ತೆರೆದಾಗ‌ ಸೀಟಿನ‌ ಕೆಳ ಭಾಗದಲ್ಲಿ ಹಾವು ಕಾಣಿಸಿಕೊಂಡಿದೆ. ತಕ್ಷಣ ಸ್ಥಳೀಯರಿಗೆ ಮಾಹಿತಿ ನೀಡಿದ್ದು, ಉಜಿರೆಯ ಸ್ನೇಕ್ ಜೋಯ್ ಸ್ಥಳಕ್ಕೆ ಆಗಮಿಸಿದರು. ಜೋಯ್ ಅವರು ‌ಪರಿಶೀಲನೆ‌ ನಡೆಸಿದ ಸಂದರ್ಭ ಹಾವು‌ ಕಾರಿನ‌ ಮ್ಯಾಟ್ ನ ಅಡಿಭಾಗದಲ್ಲಿ ಪ್ರತ್ಯಕ್ಷವಾಯಿತು. ಮ್ಯಾಟ್ ಕತ್ತರಿಸಿ‌ ತೆಗೆದರೂ ಹಾವು ಪತ್ತೆಯಾಗಲಿಲ್ಲ. ಬಳಿಕ‌ ಬೆಳ್ತಂಗಡಿ ಬಳಿ‌ಯ ಸರ್ವಿಸ್ ಸ್ಟೇಷನ್ ಒಂದಕ್ಕೆ ಸ್ನೇಕ್ ಜೋಯ್ ಅವರೇ ಕಾರು ಚಲಾಯಿಸಿಕೊಂಡು ಬಂದು ಪರಿಶೀಲನೆ ನಡೆಸಿದರು. ಕಾರಿನ ಸುತ್ತ ನೀರು ‌ಹರಿಸಿ ಹಾವನ್ನು ಹೊರಗೆ ಬರುವಂತೆ ಮಾಡುವ ಪ್ರಯತ್ನ ಮಾಡಲಾಯಿತು, ಕೊನೆಗೆ ಸ್ಟೇರಿಂಗ್ ಬಳಿಯಿಂದ ಹಾವು ಹೊರಗೆ ಬಂತು. ಬಳಿಕ ಹಾವನ್ನು ‌ಹಿಡಿದು ರಕ್ಷಿಸಲಾಯಿತು.
ಹಾವು ರಕ್ಷಣಾ ಕಾರ್ಯಚರಣೆ ಸಂದರ್ಭ ಜುವೆಲರ್ಸ್ ಬಳಿ ಹಾಗೂ ಸರ್ವಿಸ್ ಸ್ಟೇಷನ್ ಬಳಿ ಟ್ರಾಫಿಕ್ ‌ಜಾಮ್ ಉಂಟಾಗಿತ್ತು, ಜನರೂ ಜಮಾಯಿಸಿದ್ದು ಪರಿಸ್ಥಿತಿ ನಿಯಂತ್ರಿಸಲು ಟ್ರಾಫಿಕ್ ಠಾಣೆ ‌ಪೊಲೀಸರು ಹರಸಾಹಸ ಪಡುವಂತಾಯಿತು.
ಕಾರ್ಯಾಚರಣೆಗೆ ಆಲ್ವಿನ್, ರವಿಚಂದ್ರ ಲಾಯಿಲಾ ಸಹಕರಿಸಿದರು.

 

error: Content is protected !!