ಧರ್ಮೋತ್ಥಾನ ಟ್ರಸ್ಟ್‌ನಿಂದ ಶ್ರದ್ಧಾ ಕೇಂದ್ರಗಳ ಪುನರುಜ್ಜೀವನ: ಹರೀಶ್ ಪೂಂಜಾ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮೋತ್ಥಾನ‌ ಟ್ರಸ್ಟ್ ಇನ್ನೂರು ವರ್ಷಕ್ಕಿಂತ ಹಳೆಯದಾದ 250 ಕ್ಕೂ ಹೆಚ್ಚು ಶಿಥಿಲವಾದ ದೇಗುಲಗಳ ಜೀರ್ಣೋದ್ಧಾರ ಮಾಡಿದೆ. ಖಾವಂದರು ರೂಪಿಸಿದ ಈ ಟ್ರಸ್ಟ್, ಶತಮಾನಗಳ ಕಾಲ ಶಾಶ್ವತವಾಗಿ ಉಳಿಯುವಂಥ, ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಪುನರುಜ್ಜೀವನದ ಕೆಲಸಗಳನ್ನು ಮಾಡುತ್ತಿದೆ ಎಂದು ಶಾಸಕ ಹರೀಶ್ ಪೂಂಜಾ ತಿಳಿಸಿದರು .

ಅವರು ಧರ್ಮಸ್ಥಳದ ಬೀಡಿನಲ್ಲಿ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ರಾಜ್ಯೋತ್ಸವ ಪ್ರಶಸ್ತಿ ಪಡೆದುದಕ್ಕಾಗಿ ಅಭಿನಂದಿಸಿ ಮಾತನಾಡಿದರು.

ಧರ್ಮೋತ್ಥಾನ ಟ್ರಸ್ಟ್ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರವಾಗಿರುವುದು ಅತ್ಯಂತ ಸಂತಸದ ಮತ್ತು ಹೆಮ್ಮೆಯ ಸಂಗತಿ ಎಂದರು.

error: Content is protected !!