ಪುಳಿತ್ತಡಿ ಮಲೆಕುಡಿಯ ಕಾಲೋನಿಗೆ ಶಾಸಕರ ಭೇಟಿ: ಮೂಲಭೂತ ಸೌಲಭ್ಯ ಕಲ್ಪಿಸುವ ಭರವಸೆ

 

ನಾವುರ: ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು ಅವಕಾಶ ಇದ್ದರೂ ಕೂಡ ಅರಣ್ಯ ಇಲಾಖೆ ವನ್ಯಜೀವಿ ಮಂಡಳಿಯ ಅನುಮತಿ ಅವಶ್ಯಕತೆ ಇದೆ ಹೇಳುತ್ತಿದೆ. ಈ ಬಗ್ಗೆ ಅಧಿವೇಶನದಲ್ಲಿ ಮೊದಲ ಬಾರಿಗೆ ಪ್ರಶ್ನೆಯನ್ನು ಎತ್ತಿದ್ದೇನೆ. ಸಮಾಜ ಕಲ್ಯಾಣ ಇಲಾಖೆ ಮತ್ತು ಅರಣ್ಯ ಇಲಾಖೆ ವ್ಯತಿರಿಕ್ತ ಉತ್ತರವನ್ನು ನೀಡಿರುವುದರಿಂದ ಸರ್ಕಾರದ ಮಟ್ಟದಲ್ಲಿ ಸಮಸ್ಯೆ ಬಗೆಹರಿಸಲು ಈಗಾಗಲೇ ಅರಣ್ಯ ಸಚಿವರು ಮತ್ತು ಸಮಾಜ ಕಲ್ಯಾಣ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದರು.

ಅವರು ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಅಭಿವೃದ್ಧಿ ವಂಚಿತ ಪುಳಿತ್ತಡಿ ಮಲೆಕುಡಿಯ ಕಾಲೋನಿಗೆ ಶಾಸಕ ಹರೀಶ್ ಪೂಂಜರವರು ಭೇಟಿ ನೀಡಿ ಪುಳಿತ್ತಡಿ, ಎರ್ಮೆಲೆ ಭಾಗದ ಜನರ ಅಹವಾಲು ಆಲಿಸಿ ಮಾತನಾಡಿದರು. ತೀರಾ ಅವಶ್ಯಕತೆ ಇರುವ ಒಂದು ಕಿರು ಸೇತುವೆ ಮತ್ತು ಅರಣ್ಯೇತರ ಜಮೀನಿನಲ್ಲಿ ಇರುವ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಅನುದಾನ ಒದಗಿಸಿ ಕಾಮಗಾರಿ ನಡೆಸಲಾಗುವುದು.
ತಾಲೂಕು ಮಟ್ಟದಲ್ಲಿ ಸಮುದಾಯದ ಮುಖಂಡರ ಸಭೆಯನ್ನು , ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಅಧಿಕಾರಿಗಳ ಸಭೆಯನ್ನು ನಡೆಸಲಾಗಿದ್ದು ಶಾಶ್ವತ ಪರಿಹಾರ ಕಲ್ಪಿಸುವುದು ನಮ್ಮ ಆದ್ಯತೆ. 2006 ರಿಂದ 2018 ವರೆಗೆ ಅರಣ್ಯ ಹಕ್ಕು ಕಾಯ್ದೆಯ ಅನುಷ್ಠಾನದ ಬಗ್ಗೆ ಪ್ರಯತ್ನ ಪ್ರಚಾರಕ್ಕಾಗಿ ಟೀಕೆ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಂಗಾಡಿ ಸಿ.ಎ. ಬ್ಯಾಂಕ್ ಅಧ್ಯಕ್ಷರಾದ ಹರೀಶ್ ಮೋರ್ತಾಜೆ, ಗ್ರಾಮ ಪಂಚಾಯತ್ ನಿಕಟಪೂರ್ವ ಉಪಾಧ್ಯಕ್ಷರಾದ ಗಣೇಶ್ ನಾವೂರು, ಅಣ್ಣು ಪುಳಿತ್ತಡಿ, ಕೊರಗು ಮಲೆಕುಡಿಯ, ಶಿವಪ್ಪ ಮಲೆಕುಡಿಯ ಹಾಗೂ
ಗ್ರಾಮಸ್ಥರು ಉಪಸ್ಥಿತರಿದ್ದರು.

error: Content is protected !!