ಧರ್ಮಸ್ಥಳ: ಗ್ರಾಮೀಣ ವಿಕಾಸ ಆಗಿರುವುದರಿಂದ ಜನ ಜೀವನದಲ್ಲಿ ಬಹಳ ದೊಡ್ಡ ಬದಲಾವಣೆ ಆಗಿದೆ.ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ನೇತೃತ್ವದಲ್ಲಿ ಧರ್ಮಸ್ಥಳದ ದೇವಸ್ಥಾನದ ಹಿಂಭಾಗದ ಗದ್ದೆಯಲ್ಲಿ ಯಾಂತ್ರೀಕೃತ ಮತ್ತು ಸಾಂಪ್ರಾದಾಯಿಕ ಭತ್ತ ಬೇಸಾಯ ಭತ್ತದ ಕಟಾವು ಕಾರ್ಯವನ್ನು ವೀಕ್ಷಿಸಿ, ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು.
ಸಾಮಾನ್ಯವಾಗಿ ಕೃಷಿಕರು ಕೃಷಿ ಕಡೆಗೆ ಗಮನ ಹರಿಸುತ್ತಿದ್ದಾರೆ. ಅದರೆ ಎಲ್ಲಾ ಕಡೆ ಕೃಷಿ ಕಾರ್ಮಿಕರ ಕೊರತೆ ಎದ್ದು ಕಾಣುತ್ತಿದೆ ವಿಶೇಷವಾಗಿ ಕೆಲವು ವಿದ್ಯಾವಂತರಾದ ಮಕ್ಕಳು ಸ್ವತಃ ಕೆಲಸ ಮಾಡಲು ಇಷ್ಟ ಪಡುವುದಿಲ್ಲ ಈ ಸಂದರ್ಭದಲ್ಲಿ ಕೃಷಿ ಅನುಭವಸ್ಥ ಕಾರ್ಮಿಕರನ್ನು ಅವಲಂಬಿಸಬೇಕಾಗುತ್ತದೆ. ಹಾಗಾಗಿ ಈಗ ಯಾಂತ್ರೀಕರಣ ಕೃಷಿ ಪದ್ಧತಿ ಬಹಳ ಒಳ್ಳೆಯ ಪರಿವರ್ತನೆ ಆಗಲಿದೆ. ಕೃಷಿ ಕಾರ್ಮಿಕರ ಖರ್ಚು-ವೆಚ್ಚ ಹೆಚ್ಚಾಗುವ ಹಿನ್ನೆಲೆಯಲ್ಲಿ ಒಂದು ರೀತಿಯಲ್ಲಿ ಈ ಯಂತ್ರಗಳನ್ನು ಬಳಸುವುದರಿಂದ ಖರ್ಚು- ವೆಚ್ಚ ಕಡಿಮೆಮಾಡಿಕೊಳ್ಳಬಹುದು. ಅದಲ್ಲದೆ ಕಾರ್ಮಿಕರು 2 ದಿನದಲ್ಲಿ ಮಾಡುವ ಕೆಲಸವನ್ನು ಯಂತ್ರಗಳ ಮೂಲಕ ಕೆಲವೇ ಗಂಟೆಗಳಲ್ಲಿ ಮಾಡಬಹುದು. ಜನ ಇದನ್ನು ಒಪ್ಪಿಕೊಳ್ಳುವಂತಹ ಅನಿವಾರ್ಯತೆ ಇದೆ. ಧರ್ಮಸ್ಥಳದ ವತಿಯಿಂದ ಬಂಡವಾಳ ಹಾಕಿ ದೊಡ್ಡ ಯಂತ್ರಗಳನ್ನು ಈಗಾಗಲೇ ಖರೀದಿಸಿ ಆಯಾಯ ಕ್ಷೇತ್ರಗಳಲ್ಲಿ ಇಡಲಾಗಿದೆ.ಅದಲ್ಲದೆ ಯಂತ್ರಗಳ ಮೂಲಕವೇ ಹುಲ್ಲನ್ನು ಬಂಡಲ್ ಮಾಡಿ ದನಕರುಗಳಿಗೆ ಜೋಡಿಸಿಡಬಹುದು. ಅದ್ದರಿಂದ ದೇಶದಲ್ಲಿ ಇಂತಹ ಪರಿವರ್ತನೆ ಬರಬೇಕು ಎಂಬುವುದು ನಮ್ಮ ಆಪೇಕ್ಷೆಯಾಗಿದೆ ಅದಲ್ಲದೆ ಯಂತ್ರಗಳನ್ನು ಕೃಷಿಕರು ಬಳಸಿಕೊಂಡು ವೆಚ್ಚ ಕಡಿಮೆ ಮಾಡಿ ಹೆಚ್ಚು ಲಾಭ ಗಳಿಸಿ ಎಂಬುವುದನ್ನು ಕೃಷಿಕರಿಗೆ ಈ ಮೂಲಕ ತಿಳಿಸುತ್ತಿದ್ದೇನೆ.