ನಿವೃತ್ತ ಶಿಕ್ಷಕರ ಮೃತದೇಹ ಬಿಸಲೆ ಘಾಟ್ ನಲ್ಲಿ ಪತ್ತೆ

 

ಉಜಿರೆ: ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಉಜಿರೆಯ ಜನಾರ್ದನ ಶಾಲೆ ಸಮೀಪದ ನಿವಾಸಿ ನಿವೃತ್ತ  ಪ್ರಸನ್ನ ಕುಮಾರ್(65) ಅವರ ಮೃತದೇಹ ಬಿ‌ಸಿಲೆ ಘಾಟ್ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ದೃಢ ಪಡಿಸಿವೆ.

ಅ. 26ರಂದು ಬಿಸಿಲೆ ಘಾಟ್ ಸಮೀಪ ಪತ್ತೆಯಾದ ಮೃತದೇಹ ಉಜಿರೆ ನಿವಾಸಿ ನಿವೃತ್ತ ಶಿಕ್ಷಕ ಪ್ರಸನ್ನ ಕುಮಾರ್ ಅವರದ್ದು ಎಂದು ಸಕಲೇಶಪುರ ತಾಲೂಕಿನ ಯಸಳೂರು ಠಾಣೆಯ ಪೊಲೀಸರು ಧೃಢ ಪಡಿಸಿದ್ದಾರೆ.
ಬಿಸಿಲೆ ಘಾಟ್ ಸಮೀಪದ ನದಿಯಲ್ಲಿ ಶವವೊಂದು ಪತ್ತೆಯಾಗಿದ್ದು. ಮೃತದೇಹವನ್ನು ಸಕಲೇಶಪುರ ಸರ್ಕಾರಿ ಆಸ್ಪತ್ರೆಯಲ್ಲಿ ಇಡಲಾಗಿದ್ದು, ಸಂಬಂಧಿಕರಿಗೆ ತಿಳಿಸಲಾಗಿದೆ. ಅ.22ರಂದು ಬೆಳಗ್ಗೆ ಹಾಲು ತರಲೆಂದು ತನ್ನ ಬೈಕ್ ನಲ್ಲಿ ಹೋದವರು ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

error: Content is protected !!