ನೀಟ್ ಪರೀಕ್ಷೆಯಲ್ಲಿ 327ನೇ ಶ್ರೇಣಿ ಪಡೆದ ವಿದ್ಯಾರ್ಥಿನಿಗೆ ಶಾಸಕ ಹರೀಶ್ ಪೂಂಜರಿಂದ‌ ಗೌರವಾರ್ಪಣೆ

ಬೆಳ್ತಂಗಡಿ: ನೀಟ್ ಪರೀಕ್ಷೆಯಲ್ಲಿ 327ನೇ ಶ್ರೇಣಿ ಪಡೆದ ವಿದ್ಯಾರ್ಥಿನಿ ಅನರ್ಘ್ಯ ನಿವಾಸಕ್ಕೆ‌ ಶಾಸಕ ಹರೀಶ್ ಪೂಂಜ ಭೇಟಿ ನೀಡಿ ಸನ್ಮಾನಿಸಿ, ಶುಭ ಹಾರೈಸಿದರು.
ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಶಿವ ಭಟ್ ಕಟ್ಟೂರು ಇವರ ಪುತ್ರಿ, ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರತಿಭಾನ್ವಿತ‌ ವಿದ್ಯಾರ್ಥಿನಿ ಅನರ್ಘ್ಯ ಕಟ್ಟೂರು ದ್ವಿತೀಯ ಪಿ.ಯು.ಸಿ ಅಂತಿಮ ಪರೀಕ್ಷೆಯಲ್ಲಿ ರಾಜ್ಯಕ್ಕೆ ಐದನೇ ಸ್ಥಾನ ಪಡೆದಿದ್ದರು. ಪ್ರಸಕ್ತ ವರ್ಷ ನಡೆದ ನೀಟ್ ಪರೀಕ್ಷೆಯಲ್ಲಿ 683 ಅಂಕವನ್ನು ಪಡೆದು, ದೇಶದಲ್ಲಿ 327ನೇ ಶ್ರೇಣಿ‌ ಪಡೆದಿದ್ದರು. ಈ ಸಂದರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಮೋಹನ್ ಎ. ದಾಸ್, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಗಣೇಶ್ ದೇವಾಡಿಗ, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಕೊರಗಪ್ಪ, ಹರೀಶ್ ಆಚಾರ್ಯ ಮಿತ್ತರೊಡಿ, ಸುಪ್ರೀತ್ ಜೈನ್, ಮಂಜುನಾಥ್ ಆಚಾರ್ಯ, ಸುಧಾಕರ್ ಕುಲಾಲ್ ಉಪಸ್ಥಿತರಿದ್ದರು.

error: Content is protected !!