ಸುಲ್ಕೇರಿಮೊಗ್ರು ಹೈಮಾಸ್ಟ್ ದೀಪ ಶಾಸಕ ಹರೀಶ್ ಪೂಂಜ ಉದ್ಘಾಟನೆ…

ಅಳದಂಗಡಿ: ಸುಲ್ಕೇರಿಮೊಗ್ರು ಗ್ರಾಮದ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿ ಸಮೀಪ ನೂತನವಾಗಿ ನಿರ್ಮಿಸಿದ ಹೈಮಾಸ್ಟ್ ದೀಪವನ್ನು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ತಾಲೂಕಿನ ಎಲ್ಲಾ ಗ್ರಾಮಗಳಿಗೆ ವಿವಿಧ ರೀತಿಯ ಮೂಲಭೂತ ಸೌಕರ್ಯಗಳನ್ನು ಪಕ್ಷಭೇದ ಮರೆತು ಮಾಡುತ್ತಿದ್ದೇನೆ ಅದೇ ರೀತಿ ತಾಲೂಕಿನ ಅಭಿವೃದ್ಧಿಯಲ್ಲಿ ಯಾವುದೇ ರಾಜಕೀಯ ಮಾಡದೇ ಪ್ರಾಮಾಣಿಕವಾಗಿ ಸ್ಪಂದಿಸುತಿದ್ದೇನೆ ಎಂದರು.

ತಾಲೂಕಿನ ಅಭಿವೃದ್ಧಿಯನ್ನೇ ಮೂಲ ಮಂತ್ರವನ್ನಾಗಿಸಿಕೊಂಡು ನವ ಬೆಳ್ತಂಗಡಿ ನಿರ್ಮಾಣದ ಕನಸ್ಸನ್ನು ಕಾಣುತ್ತಿರುವ ಶಾಸಕರ ಕೆಲಸಗಳು ಅಭಿನಂದನೀಯ.ತಾಲೂಕಿನ ಅಭಿವೃದ್ಧಿ ದೃಷ್ಟಿಯಿಂದ ಶಾಸಕರೊಂದಿಗೆ ಕೈಜೋಡಿಸುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಹೇಳಿದರು ಸರಳ ರೀತಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ತಾ.ಪಂ ಸದಸ್ಯರುಗಳಾದ ಸುಧೀರ್ ಸುವರ್ಣ, ವಿನುಷಾ ಪ್ರಕಾಶ್, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ,ಸದಾನಂದ ಪೂಜಾರಿ ಉಂಗಿಲಬೈಲು ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

error: Content is protected !!