ಸ್ಪಂದನಾ ಸೇವಾ ಸಂಘ ದಿಂದ ಅರ್ಥಿಕ ನೆರವು

ಬೆಳ್ತಂಗಡಿ: ಸ್ಪಂದನಾ ಸೇವಾ ಸಂಘದ ಅಕ್ಟೋಬರ್ ತಿಂಗಳ ಸೇವಾ ಯೋಜನೆಯ ಅರ್ಥಿಕ ಧನಸಹಾಯವನ್ನು ಬೆಳ್ತಂಗಡಿ ತಾಲೂಕು ಕಲ್ಮಂಜ ಗ್ರಾಮದ ಹುಂಕ್ರೊಟ್ಟು ನಿವಾಸಿ ಶ್ರೀಮತಿ ಡೀಕಮ್ಮ ಇವರಿಗೆ ಮನೆ ನಿರ್ಮಾಣ ಸಹಾಯಾರ್ಥವಾಗಿ ರೂ15,000 ದ ಚೆಕ್ಕನ್ನು ಕಲ್ಮಂಜ ಗ್ರಾಮ ಸಮಿತಿಯ ಗೌರವಾಧ್ಯಕ್ಷರಾದ ರಮೇಶ್ ಗೌಡ ಗುಲ್ಲೋಡಿ, ಮತ್ತು ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನಿರ್ದೇಶಕ, ನ್ಯಾಯವಾದಿ ಗೋಪಾಲಕೃಷ್ಣ ಗೌಡ ಗುಲ್ಲೋಡಿ ಇವರ ಮೂಲಕ ಫಲಾನುಭವಿ ಕುಟುಂಬಕ್ಕೆ ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನಿರ್ದೇಶಕರುಗಳಾದ ಆನಂದ ಗೌಡ .ಡಿ.ಉಜಿರೆ, ಮತ್ತು ಶ್ರೀಮತಿ ಉಷಾದೇವಿ ಕಿನ್ಯಾಜೆ ಬೆಳಾಲು, ವಾಣಿ ಸೌಹಾರ್ದ ಕೋ-ಅಪರೇಟೀವ್ ಸೊಸೈಟಿ ಲಿ. ಇದರ ನಿರ್ದೇಶಕರಾದ ಸುರೇಶ್ ಗೌಡ ಕೌಡಂಗೆ, ವಾಣಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರುಗಳಾದ ಮಹಾಬಲ ಗೌಡ ಮತ್ತು ಶ್ರೀಮತಿ ಮೀನಾಕ್ಷಿ ಮಹಾಬಲ ಗೌಡ, ನೇಮಣ್ಣ ಗೌಡ, ಜಯಂತ ಗೌಡ ಕುಕ್ಕೆಮಜಲು ಮತ್ತು ಸ್ಥಳೀಯ ಗ್ರಾಮದ ಸ್ವಜಾತಿ ಬಾಂಧವರು ಹಾಗೂ ಸ್ಪಂದನಾ ಸೇವಾ ಸಂಘದ ಸದಸ್ಯರು ಉಪಸ್ಥಿತರಿದ್ದರು.

error: Content is protected !!