ಜಿಲ್ಲಾ ಹಾಗೂ ವಲಯ ಮಟ್ಟದ ಕುತೂಹಲ ಕಪ್ ಸೀಸನ್ -6 ಕ್ರೀಡಾ ಕೂಟ…

   

ಉಜಿರೆ:ಕುತೂಹಲ ಕಪ್ ಸೀಸನ್ 6 ಜಿಲ್ಲಾಮಟ್ಟದ ಸಿಂಗಲ್ ಗ್ರಿಪ್ ಮತ್ತು ವಲಯ ಮಟ್ಟದ ಪಂದ್ಯಾವಳಿ ಉಜಿರೆ ಜನಾರ್ಧನ ದೇವಸ್ಥಾನದ ಸಮೀಪ ರಂಜನ್ ದೇವಾಡಿಗ ಇವರ ಗದ್ದೆಯಲ್ಲಿ ಆದಿತ್ಯವಾರ ಅತ್ಯಂತ ಯಶಸ್ವಿಯಾಗಿ ನಡೆಯಿತು
ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ವಿಶೇಷ ಸಾಧನೆಗಾಗಿ ಲೂವಿಸ್ ರೋಡ್ರಿಗಸ್ ಅವರಿಗೆ ಕೂತೂಹಲ ಗೌರವ ಸಮ್ಮಾನ್ ಬಿರುದು ನೀಡಿ ಗೌರವಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಬೆಳ್ತಂಗಡಿ ತಾ.ಪಂ , ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಧರ್ ಕಲ್ಮಂಜ, ಕಣಿಯೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುನೀಲ್, ವಕೀಲರಾದ ಶ್ರೀ ವಸಂತ ಮರಕಡ ಭಾಗವಹಿಸಿ ಪ್ರಶಸ್ತಿಯನ್ನು ವಿತರಿಸಿ ಪ್ರೇರಣಾತ್ಮಕ ಮಾರ್ಗದರ್ಶನ ನೀಡಿದರು.
ಹರೀಶ್ ಅಂತರ , ರೋಹಿತ್ ಮತ್ತು ತೀರ್ಪುಗಾರರಾಗಿ ಶ್ರೀ ಧರ್ಮೇಂದ್ರ ಬೆಳಾಲ್ ಸಹಕರಿಸಿದರು.
ವಿಜಯದಶಮಿಯ ಪ್ರಯುಕ್ತ ಕ್ರೀಡಾಭಿಮಾನಿಗಳಿಗೆ ಸ್ವಾಮಿ ಕೊರಗಜ್ಜ ಅರ್ಥ್ ಮೂವರ್ಸ್ ಮಾಲಕ ಗಣೇಶ್ ಗೌಡ ಮಧ್ಯಾಹ್ನ ಭೋಜನದ ವ್ಯವಸ್ಥೆಯನ್ನು ಮಾಡಿದ್ದರು.
ಈ ಬಗ್ಗೆ ಕ್ರೀಡಾ ಕೂಟ ಆಯೋಜಕ ವಿಜಯ ಗೌಡ ಅತ್ತಾಜೆ ಪ್ರಜಾಪ್ರಕಾಶ ನ್ಯೂಸ್ ಗೆ ಪ್ರತಿಕ್ರಿಯಿಸಿ ಕೆಲವು ವಾರಗಳಿಂದ ಈ ವಿವಿಧ ರೀತಿಯ ಕ್ರೀಡಾಕೂಟಗಳನ್ನು ವಿವಿಧ ಕಡೆಗಳಲ್ಲಿ ಆಯೋಜಿಸಿಕೊಂಡು ಬಂದಿದ್ದೇವೆ ಈಗಾಗಲೇ ಕುತೂಹಲ ಕಪ್ ಸೀಸನ್- 6 ಮುಗಿದಿದ್ದು ಮುಂದಿನ ದಿನಗಳಲ್ಲಿ ಇನ್ನೂ ಒಳ್ಳೆಯ ರೀತಿಯಲ್ಲಿ ಮುಂದುವರಿಸಿಕೊಂಡು ಹೋಗಿ ಕ್ರೀಡಾ ಪಟುಗಳಿಗೆ ಉತ್ತಮವಾದ ಅವಕಾಶವನ್ನು ಈ ಮೂಲಕ ಮಾಡಿಕೊಡುತಿದ್ದೇವೆ ಎಂದರು.
ಈ ಕ್ರೀಡಾ ಕೂಟದಲ್ಲಿ ವಿವಿಧ ಭಾಗಗಳ ಸುಮಾರು 15 ತಂಡಗಳು ಭಾಗವಹಿಸಿದ್ದವು.

error: Content is protected !!