ಸೌತ್ ಕೆನರಾ ಫೋಟೊಗ್ರಾಫರ್ಸ್ ಅಸೋಸಿಯೇಶನ್, ಡಾ. ಹೆಗ್ಗಡೆಯವರಿಗೆ ಗೌರವಾರ್ಪಣೆ…

ಧರ್ಮಸ್ಥಳ: ಸೌತ್ ಕೆನರಾ ಫೋಟೊಗ್ರಾಫರ್ಸ್ ಅಸೋಸಿಯೇಶನ್ ಬೆಳ್ತಂಗಡಿ ವಲಯದ ವತಿಯಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 53ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ ದ ಅಂಗವಾಗಿ ಧರ್ಮಸ್ಥಳದ ಬೀಡಿನಲ್ಲಿ ಗೌರವಾರ್ಪಣೆ ಸಲ್ಲಿಸಲಾಯಿತು.
ಈ ಸಂದರ್ಭ ವಲಯಾಧ್ಯಕ್ಷ ಸುರೇಶ್ ಕೌಡಂಗೆ, ಗೌರವಾಧ್ಯಕ್ಷ ಗೋಪಾಲ ಎನ್.ಎ., ಸ್ಥಾಪಕಾಧ್ಯಕ್ಷ ಪಾಲಾಕ್ಷ ಪಿ.ಸುವರ್ಣ, ಜಿಲ್ಲಾ ಮಾಜಿ ಅಧ್ಯಕ್ಷ ವಿಲ್ಸನ್ ಜಾರ್ಜ್ ಗೊನ್ಸಾಲ್ವಿಸ್, ಕಾರ್ಯದರ್ಶಿ ಗಂಗಾಧರ ಉಜಿರೆ, ಕೋಶಾಧಿಕಾರಿ ಪ್ರಭಾಕರ ಧರ್ಮಸ್ಥಳ, ಉಪಾಧ್ಯಕ್ಷ ಮಹಾವೀರ ಜೈನ್, ಉಮೇಶ್ ಹಳೆಪೇಟೆ, ರಾಮಕೃಷ್ಣ ರೈ ಉಜಿರೆ, ಸಂದೀಪ್ ದೇವ್ ಧರ್ಮಸ್ಥಳ, ಸಂದೇಶ್ ನಿಡ್ಲೆ ಉಪಸ್ಥಿತರಿದ್ದರು.

error: Content is protected !!