ಹೋಲಿ ರೆಡಿಮರ್ ಚರ್ಚ್ ಬೆಳ್ತಂಗಡಿ, ಸ್ವಚ್ಛತಾ ಕಾರ್ಯ:

 

 

 

ಬೆಳ್ತಂಗಡಿ: ಹೋಲಿ ರೆಡಿಮರ್ ಚರ್ಚ್ ವತಿಯಿಂದ ಲಾಯಿಲ ಗ್ರಾಮದಲ್ಲಿ ಸ್ವಚ್ಛತಾ ಅಭಿಯಾನವನ್ನು ಮಾ 16 ರಂದು ಹಮ್ಮಿಕೊಳ್ಳಲಾಯಿತು.
ಲಾಯಿಲ ಗ್ರಾಮದ ದರ್ಪಿಂಜೆಯಿಂದ ಪಡ್ಲಾಡಿವರೆಗೆ ರಸ್ತೆ ಬದಿ ಪ್ಲಾಸ್ಟಿಕ್ ಸೇರಿದಂತೆ ಕಸವನ್ನು ಸ್ವಚ್ಛಗೊಳಿಸಲಾಯಿತು. ಈ ವೇಳೆ ಚರ್ಚ್ ಧರ್ಮಗುರುಗಳಾದ ವಂದನೀಯ ಫಾ ವಾಲ್ಟರ್ ಒಸ್ವಾಲ್ಡ್ ಡಿಮೆಲ್ಲೊ ಅವರು ಮಾರ್ಗದರ್ಶನ ನೀಡಿದರು.ಸಂತ ಅಂತೋನಿ ವಾಳೆಯ ಸದಸ್ಯರು ಹಾಗೂ ಇನ್ನಿತರರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡರು. ಲಾಯಿಲ ಗ್ರಾಮ ಪಂಚಾಯತ್ ಸಹಕಾರ ನೀಡಿತು.

error: Content is protected !!