ಗ್ರಾಮ ಪಂಚಾಯತ್ ಚುನಾವಣೆ ಎಸ್.ಡಿ.ಪಿ.ಐ ಅಭ್ಯರ್ಥಿಗಳ ಘೋಷಣೆ

     

ಬೆಳ್ತಂಗಡಿ : ಗ್ರಾಮ ಪಂಚಾಯತ್ ಚುನಾವಣೆಯ ಮೊದಲ ಹಂತದ ಅಭ್ಯರ್ಥಿ ಘೋಷಣಾ ಕಾರ್ಯಕ್ರಮವು ಕಕ್ಕೇಜಾಲ್ ನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಪಿ ಐ ಉಜಿರೆ ಗ್ರಾಮ ಸಮಿತಿ ಅಧ್ಯಕ್ಷ ಆಶ್ಪಾಕ್ ಕಕ್ಕೇಜಾಲ್ ವಹಿಸಿದ್ದರು. ಪಿ. ಎಫ್. ಐ ಕರ್ನಾಟಕ ರಾಜ್ಯ ಸಮಿತಿ ಸದಸ್ಯ “ಶಾಫಿ ಬೆಳ್ಳಾರೆ ಮುಖ್ಯ ಅತಿಥಿಯಾಗಿ ಭಾಗವಹಿಸಿ “ಸಂವಿಧಾನ ವಿರೋಧಿಗಳ ಹಾಗೂ ಅನ್ಯಾಯ ಅಕ್ರಮಗಳ ವಿರುದ್ಧದ ನಮ್ಮ ಹೋರಾಟವನ್ನು ಗ್ರಾಮ ಪಂಚಾಯಿತ್ ಒಳಗೂ ಮುಂದುವರಿಸಲು ಹಾಗೂ ತಮ್ಮ ಊರನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಈಗಾಗಲೇ ಮೊದಲ ಹಂತದಲ್ಲಿ ಉಜಿರೆ ಗ್ರಾಮ ಪಂಚಾಯತ್ ನಲ್ಲಿ ಆಯ್ಕೆ ಮಾಡಿದ್ದೇವೆ ನಮ್ಮ ಅಭ್ಯರ್ಥಿಗಳಿಗೆ ಸಂಪೂರ್ಣ ಬೆಂಬಲ ನೀಡಬೇಕಾಗಿದೆ ಎಂದರು . ಎಸ್ ಡಿ ಪಿ ಐ ಬೆಳ್ತಂಗಡಿ ವಿಧಾನ ಸಭಾ ಅಧ್ಯಕ್ಷ ಹೈದರ್ ನಿರ್ಸಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಭ್ಯರ್ಥಿ ಘೋಷಣೆಯನ್ನು ಪಿಎಫ್ಐ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ ನೆರವೇರಿಸಿದರು.
ಪಕ್ಷದ ಸಿದಾಂತಗಳನ್ನು ಒಪ್ಪಿ ಹಲವಾರು ಮಂದಿ ಪಕ್ಷಕ್ಕೆ ಸೇರ್ಪಡೆಯಾದರು

ವೇದಿಕೆಯಲ್ಲಿ ಎಸ್ ಡಿ ಪಿ ಐ ಜಿಲ್ಲಾ ಸಮಿತಿ ಸದಸ್ಯರಾದ ಅಕ್ಬರ್ ಬೆಳ್ತಂಗಡಿ, ವಿಧಾನಸಭಾ ಕ್ಷೇತ್ರ ಸಮಿತಿ ಕೊಶಾಧಿಕಾರಿ ಫಝಲ್ ಕೋಯಾ ಚುನಾವಣಾ ಉಸ್ತುವಾರಿ ಮಹಮ್ಮದ್ ಆಲಿ, ಪಿ. ಎಫ್. ಐ ಉಜಿರೆ ಡಿವಿಷನ್ ಕಾರ್ಯದರ್ಶಿಗಳಾದ ಸಫ್ವಾನ್, ಎಸ್. ಡಿ. ಟಿ. ಯೂ ತಾಲೂಕು ಅಧ್ಯಕ್ಷ ಫಾರೂಕ್ ಕ್ಯೂ.ಟಿ.ಎಫ್. ಹಾಗೂ ಅಶ್ರಫ್ ಚಾರ್ಮಾಡಿ ಉಪಸ್ಥಿತರಿದ್ದರು.
ಅತೀಶ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.

error: Content is protected !!