ಠೇವಣಿ ಹಣ ಹಿಂತಿರುಗಿಸದೆ ಸತಾಯಿಸುತ್ತಿರುವ ಮಲ್ಟಿಪರ್ಪಸ್ ಸೊಸೈಟಿ: ಹಣ ನೀಡದೇ  ಹೋಗುವುದಿಲ್ಲ , ಗ್ರಾಹಕರ ಪಟ್ಟು,ಪೊಲೀಸ್ ಎಂಟ್ರಿ:

 

 

ಬೆಳ್ತಂಗಡಿ:ಸಂತೆಕಟ್ಟೆ ಬಳಿಯಲ್ಲಿ ಕಾರ್ಯಚರಿಸುತಿದ್ದ ಸೊಸೈಟಿಯೊಂದು ಕೋಟಿಗಟ್ಟಲೇ ಹಣ ಅವ್ಯವಹಾರ ನಡೆದ  ಬೆನ್ನಲ್ಲೇ ತಾಲೂಕಿನಲ್ಲಿ ಮತ್ತೊಂದು ಸೊಸೈಟಿಯು ವಂಚನೆಯ ಆರೋಪವನ್ನು ಎದುರಿಸುತ್ತಿದೆ.

ಆವರ್ತಕ ಠೇವಣಿ,( ಆರ್.ಡಿ.) ಡಿಪಾಸಿಟ್, ಕಟ್ಟಿದ ಹಣದ ಅವಧಿ ಮುಗಿದಿದ್ದರೂ ಹಣ ಹಿಂತಿರುಗಿಸದೇ ಸತಾಯಿಸುತ್ತಿರುವ ಸೊಸೈಟಿಯೊಂದರ ವಿರುದ್ಧ ಗ್ರಾಹಕರು ಆಕ್ರೋಶ ಹೊರಹಾಕಿ ಗಲಾಟೆಗೆ ಮುಂದಾದ ಘಟನೆ ಬೆಳ್ತಂಗಡಿಯಲ್ಲಿ ಮಾ 13 ರಂದು ನಡೆದಿದೆ.

ಬೆಳ್ತಂಗಡಿ ತಾಲೂಕಿನ ಮೂರು ಮಾರ್ಗದ ಬಳಿಯ ಹನುಮಾನ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಚರಿಸುತ್ತಿರುವ ಜನ ಸಮೃದ್ಧಿ ಮಲ್ಟಿಪರ್ಪಸ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಸುಮಾರು 180 ಗ್ರಾಹಕರ ಒಟ್ಟು 1ಕೋಟಿ 33 ಲಕ್ಷ ರೂಪಾಯಿ ಆರ್ ಡಿ ಇದ್ದು ಇದರ ಅವಧಿ ಮುಗಿದಿದ್ದರೂ ಹಣ ನೀಡದೇ ಸತಾಯಿಸುತಿದ್ದಾರೆ ಎಂದು ಆರೋಪಿಸಿ ಡಿಪಾಸಿಟ್ ದಾರರು ಸೊಸೈಟಿಗೆ ಬಂದು ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರಲ್ಲದೇ ಕಟ್ಟಿದ ಹಣ ತಕ್ಷಣ ನಮಗೆ ನೀಡಬೇಕು ಎಂದು ಹಠ ಹಿಡಿದಿದ್ದಾರೆ. ಸಂಬಂಧ ಪಟ್ಟವರಿಗೆ ಪೋನ್ ಮಾಡಿದರೂ ಪೋನ್ ರಿಸೀವ್ ಮಾಡ್ತಿಲ್ಲ, ಬ್ಯಾಂಕ್ ಗೆ ಬಂದು ಕೇಳಿದರೆ ಸಮರ್ಪಕ ಉತ್ತರ ನೀಡುತ್ತಿಲ್ಲ,  ನ ಆರ್.ಡಿ ಮಾಡಿದ ಏಜೆಂಟ್ ಗಳನ್ನು ಜನರು ಪ್ರಶ್ನೆ ಮಾಡುತಿದ್ದಾರೆ.ಕೇಳಿದರೆ ಜಾಗ ಮಾರಿ ಹಣ ಹಿಂತಿರುಗಿಸುತ್ತೇವೆ ಎಂಬ ಉತ್ತರ ನೀಡುತ್ತಾರೆ ಎಂದು ಏಜೆಂಟ್ ಒಬ್ಬರು ಬೇಸರದಿಂದ ಪ್ರತಿಕ್ರಿಯೆ ನೀಡಿದ್ದಾರೆ. ಶುಕ್ರವಾರ ಸೊಸೈಟಿಗೆ ಬಂದ ಹಲವಾರು ಮಂದಿ ಗ್ರಾಹಕರು ಸಿಬಂದಿಗಳನ್ನು ತರಾಟೆಗೆ ತೆಗೆದುಕೊಂಡರಲ್ಲದೇ ಸಂಬಂಧಪಟ್ಟವನ್ನು ಬರುವಂತೆ ಒತ್ತಾಯಿಸಿ ಕಟ್ಟಿದ ಹಣ ತಕ್ಷಣ ಹಿಂತಿರುಗಿಸುವಂತೆ ಪಟ್ಟು ಹಿಡಿದರು. ಈ ವೇಳೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ವಂಚನೆ ಆಗಿದ್ದಲ್ಲಿ ದಾಖಲೆ ಸಹಿತ ದೂರು ಸಲ್ಲಿಸಿ ಎಂದರು.‌ಜನಸಮೃದ್ದಿ ಸೊಸೈಟಿಯು ದಕ್ಷಿಣ ಕನ್ನಡದಲ್ಲಿ 4 ಶಾಖೆಗಳು ಸೇರಿದಂತೆ ಕರ್ನಾಟಕದ್ಯಾಂತ ಸುಮಾರು 25 ಶಾಖೆಗಳನ್ನು ಹೊಂದಿದ್ದು, ಇದರ ಪ್ರಧಾನ ಕಛೇರಿ ಯಲಹಂಕದಲ್ಲಿದೆ ಎಂದು ತಿಳಿದು ಬಂದಿದೆ.

error: Content is protected !!