‘ಪ್ರಜಾಪ್ರಕಾಶ’ ಸಮಾಜಕ್ಕೆ ದಾರಿದೀಪವಾಗಲಿ: ಡಾ.ಡಿ.ವೀರೇಂದ್ರ ಹೆಗ್ಗಡೆ


ಬೆಳ್ತಂಗಡಿ: ಜಗತ್ತಿನಲ್ಲಿ ಹಲವಾರು ವಿದ್ಯಮಾನಗಳು ನಡೆಯುತ್ತಿದ್ದು, ಧನಾತ್ಮಕ ರೀತಿಯಲ್ಲಿ ವಿಚಾರಗಳನ್ನು ಹೊರಜಗತ್ತಿಗೆ ತಿಳಿಸುವ ಕಾರ್ಯವನ್ನು ಪ್ರಜಾಪ್ರಕಾಶ ತನ್ನ ಆ್ಯಪ್ ಮೂಲಕ ಮಾಡಲಿದೆ. ಮೊಬೈಲ್ ಮೂಲಕ ನೇರವಾಗಿ ಮಾಹಿತಿಗಳನ್ನು ಗ್ರಾಮೀಣ ಜನತೆಗೂ ತಲುಪಿಸುವ ಕಾರ್ಯ ಮಾಡುವುದಾಗಿ ‘ಪ್ರಜಾಪ್ರಕಾಶ’ ತಂಡ ತಿಳಿಸಿದ್ದು. ಕೃಷಿಕರು, ವಿದ್ಯಾರ್ಥಿಗಳು, ಮಹಿಳೆಯರು ಹೀಗೆ ಎಲ್ಲಾ ವರ್ಗದ ಜನತೆಗೆ ಇದರಿಂದ ಉಪಯೋಗವಾಗಿ ಸಮಾಜಕ್ಕೆ ದಾರಿದೀಪವಾಗಲಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ನುಡಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಬೀಡಿನಲ್ಲಿ ‘ಪ್ರಜಾಪ್ರಕಾಶ ನ್ಯೂಸ್,’ಸಾಧಿಸುವೆಡೆಗಿನ ದಿಟ್ಟ ಹೆಜ್ಜೆ’ ವೆಬ್ ಚಾನಲ್ ಲೋಗೋ ಅನಾವರಣಗೊಳಿಸಿ ಮಾತನಾಡಿದರು.
ನವಯುಗದಲ್ಲಿ ಜಗತ್ತಿನ ಮಾಹಿತಿಗಳು ಶೀಘ್ರದಲ್ಲಿ ಜನರನ್ನು ತಲುಪಲು ಈ ಆ್ಯಪ್ ಸಹಾಯಕವಾಗಲಿದ್ದು, ತಂಡ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿ ಜನಮೆಚ್ಚುಗೆಗೆ ಪಾತ್ರವಾಗಲಿ ಎಂದು ಶುಭಹಾರೈಸಿದರು.
ಪ್ರಜಾಪ್ರಕಾಶ ನ್ಯೂಸ್, ತನ್ನ ಆ್ಯಪ್ ಮೂಲಕ ವೈವಿಧ್ಯಮಯ ಸುದ್ದಿಗಳು ಮೊಬೈಲ್ ಮೂಲಕ ಅಂಗೈಗೆ ಜಗತ್ತಿನ ಸುದ್ದಿಗಳನ್ನು ತಲುಪಿಸುವ ಕಾರ್ಯವನ್ನು ಮಾಡಲಿದೆ. ಬೆಳ್ತಂಗಡಿ ತಾಲೂಕಿನ ಸಮಾನ ಮನಸ್ಕ ಪತ್ರಕರ್ತರು ಸೇರಿ ಈ ಚಾನಲ್ ರೂಪಿಸಿದ್ದು, ಸ್ವಸ್ಥ ಸಮಾಜ ನಿರ್ಮಿಸುವ ಸಂಕಲ್ಪದೊಂದಿಗೆ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
ಪ್ರಜಾಪ್ರಕಾಶ ಆ್ಯಪ್ ಬಿಡುಗಡೆ ಸಂದರ್ಭ ಪುಷ್ಪರಾಜ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ವಿವಿಧ ವಿಭಾಗಗಳ‌ ಮುಖ್ಯಸ್ಥರಾದ ಭುವನೇಶ್ ಗೇರುಕಟ್ಟೆ, ಪ್ರಸಾದ್ ಶೆಟ್ಟಿ ಎಣಿಂಜೆ, ಹರ್ಷಿತ್ ಪಿಂಡಿವನ, ಉಮೇಶ್ ಕುಲಾಲ್, ಇಮ್ರಾನ್, ತಾಂತ್ರಿಕ ವಿಭಾಗದ ಅರವಿಂದ್ ಭಟ್, ಬಾಲಕೃಷ್ಣ ಶೆಟ್ಟಿ, ಜಹೀರ್ ಮೊದಲಾದವರು ಉಪಸ್ಥಿತರಿದರು.

error: Content is protected !!