ಬೆಳ್ತಂಗಡಿ ಅಬಕಾರಿ ಅಧಿಕಾರಿಗಳಿಂದ ಒಂದು ಲಕ್ಷ ರೂ. ಮೌಲ್ಯದ ಮದ್ಯ ವಶ

ಬೆಳ್ತಂಗಡಿ: ಅಬಕಾರಿ ಇಲಾಖೆ‌ ಅಧಿಕಾರಿಗಳು ದಾಳಿ ನಡೆಸಿ ಸುಮಾರು ಒಂದು ಲಕ್ಷ ರೂ. ಮೌಲ್ಯದ ಮದ್ಯ ವಶಪಡಿಸಿಕೊಳ್ಳುವ ಜೊತೆಗೆ‌ ಓರ್ವ ಆರೋಪಿಯನ್ನೂ ಬಂಧಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಮಾಲ್ತಡ್ಕ‌ ಎಂಬಲ್ಲಿ ಅಪೆ ರಿಕ್ಷಾದಲ್ಲಿ‌ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡಲು ಸಾಗಾಟ ‌ಮಾಡುತ್ತಿದ್ದ ಬಗ್ಗೆ ಬೆಳ್ತಂಗಡಿ ಅಬಕಾರಿ ಇಲಾಖೆಗೆ ದೊರೆತ ಖಚಿತ ಮಾಹಿತಿ ಮೇರೆಗೆ ರಿಕ್ಷಾವನ್ನು ತಡೆದು ನಿಲ್ಲಿಸಿ ಪರಿಶೀಲನೆ ಮಾಡಿದಾಗ 17.280 ಲೀಟರ್ ಮಧ್ಯ ರಿಕ್ಷಾದಲ್ಲಿ ದೊರೆತ್ತಿದ್ದು ಆಟೋ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ. ರಿಕ್ಷಾದಲ್ಲಿದ್ದ ಆರೋಪಿ ಬೆಳಾಲು ಗ್ರಾಮದ ಹರಿಶ್ಚಂದ್ರ ಡಿ.ಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆಟೋ ಮಾಲಕರ ಬಗ್ಗೆ ಮಾಹಿತಿ ಇದ್ದು ಅವರ ಪತ್ತೆಗೆ ಬಲೆ‌ ಬಿಸಲಾಗಿದೆ. ಒಟ್ಟು ಮೌಲ್ಯ 1.07 ಲಕ್ಷ ರೂ ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ. ಬೆಳ್ತಂಗಡಿ ವಲಯ ಅಬಕಾರಿ ನಿರೀಕ್ಷಕರಾದ ಸೌಮ್ಯಲತಾ ಎನ್. ಪ್ರಕರಣ‌ ದಾಖಲಿಸಿಕೊಂಡಿದ್ದಾರೆ.
ಜಿಲ್ಲಾ ಅಬಕಾರಿ ಉಪ ಆಯುಕ್ತರಾದ ಶೈಲಜಾ.ಎ.ಕೋಟೆ ಅವರ ಮಾರ್ಗದರ್ಶನದ ಮೇರೆಗೆ ಬಂಟ್ವಾಳ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಶೋಭಾ.ಕೆ ಅವರ ನೇತೃತ್ವದಲ್ಲಿ ಬೆಳ್ತಂಗಡಿ ವಲಯ ಕಛೇರಿಯ ನಿರೀಕ್ಷಕರ ತಂಡದ ಸಿಬ್ಬಂದಿಗಳಾದ ಸಯ್ಯದ್ ಶಬೀರ್, ಅಬ್ದುಲ್ ಹಮೀದ್.ಕೆ, ಶಿವಶಂಕರಪ್ಪ, ರವಿಚಂದ್ರ ಬೂದಿಹಾಳ, ಚಾಲಕ ನವೀನ್ ಕುಮಾರ್. ಪಿ. ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

error: Content is protected !!