ಮಾರುತಿ ಮಾನ್ಪಡೆ ಅವರಿಗೆ ಶ್ರದ್ಧಾಂಜಲಿ

ಬೆಳ್ತಂಗಡಿ: ಹಿರಿಯ ಕಮ್ಯೂನಿಸ್ಟ್ ನಾಯಕ, ಕಾರ್ಮಿಕ ಸಂಘಟನೆಯ ರಾಜ್ಯ ಮುಖಂಡರು, ರೈತ ಮುಖಂಡರಾದ ಮಾರುತಿ ಮಾನ್ಪಡೆ ಅವರಿಗೆ ಶ್ರದ್ದಾಂಜಲಿ ನೀಡುವುದು ಅವರ ದಾರಿಯಲ್ಲಿ ನಡೆಯುವುದು ನಮ್ಮ ಆದ್ಯ ಕರ್ತವ್ಯ ಎಂದು ಕಮ್ಯೂನಿಸ್ಟ್ ನಾಯಕ ಬಿ.ಎಂ.ಭಟ್ ಅವರು ಹೇಳಿದರು.
ಅವರು ಮಂಗಳವಾರ ಕಾರ್ಮಿಕ ಸಂಘಗಳ ಆಶ್ರಯದಲ್ಲಿ ಇಎಂಎಸ್ ಭವನದಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ದುಡಿಯುವ ಜನರ ಪರವಾಗಿ ಅವರು ನಡೆದ ದಾರಿಯಲ್ಲಿ ನಡೆಯುತ್ತ, ಸಮಾಜದ ಬದಲಾವಣೆಗೆ ದುಡಿಯುವುದು ಅವರಿಗೆ ನಾವು ಕೊಡುವ ನಿಜವಾದ ಶ್ರದ್ದಾಂಜಲಿ ಆಗಿರುತ್ತದೆ ಎಂದರು.
ಕಾರ್ಮಿಕ ಮುಖಂಡರುಗಳಾದ ಮಂಜುನಾಥ್, ಈಶ್ವರಿ, ನೆಬಿಸಾ, ಜಯಶ್ರೀ, ಜಯರಾಮ ಮಯ್ಯ, ಚನಿಯಪ್ಪ ಮಲೆಕುಡಿಯ, ಪುಷ್ಪಾ, ಸುಜಾತ, ಶ್ಯಾಮರಾಜ್ ಪಟ್ರಮೆ ಮೊದಲಾದವರಿದ್ದರು.

error: Content is protected !!