ಬೆಳ್ತಂಗಡಿ,ಮುಳಿಯ ಜ್ಯುವೆಲ್ಲರ್ಸ್ ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ:

 

ಬೆಳ್ತಂಗಡಿ: ದ.ಕ. ಜಿ ಪಂ ಹಿರಿಯ ಪ್ರಾಥಮಿಕ ಶಾಲೆ ಪಡ್ಲಾಡಿ ಇಲ್ಲಿನ ಮಕ್ಕಳಿಗೆ ಮುಳಿಯ ಜ್ಯುವೆಲ್ಲರ್ಸ್ ವತಿಯಿಂದ ಉಚಿತ ಶಾಲಾ ಬ್ಯಾಗ್ ವಿತರಣೆಯು ಜು 11 ನಡೆಯಿತು.

ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ,ಪುಸ್ತಕ ಸೇರಿದಂತೆ ಇನ್ನೂ ಅನೇಕ ರೀತಿಯ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಕಾರ್ಯ ಮುಳಿಯ ಜ್ಯುವೆಲ್ಲರ್ಸ್ ಮಾಡುತ್ತಿರುವುದು ಅಭಿನಂದನೀಯ , ಲಾಭದ ಒಂದು ಪಾಲು ಸಾಮಾಜಿಕ ಸೇವಾ ಚಟುವಟಿಕೆಗಳಿಗೆ ವಿನಿಯೋಗಿಸುವ ಮೂಲಕ ಮಾದರಿ ಕಾರ್ಯಕ್ರಮಗಳನ್ನು ಮಾಡುತ್ತಿರುವ ಮುಳಿಯ ಜ್ಯುವೆಲ್ಲರ್ಸ್ ಪಾರದರ್ಶಕ ವ್ಯವಹಾರ , ಸಿಬ್ಬಂದಿಗಳ ನಗುಮೊಗದ ಸೇವೆಯಿಂದ  ಈಗಾಗಲೇ  ತಾಲೂಕಿನ ಜನತೆಯ ಪ್ರೀತಿಯ ಆಭರಣ ಮಳಿಗೆಯಾಗಿ ಬೆಳೆದಿದೆ.  ಸಂಸ್ಥೆ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಪತ್ರಕರ್ತ ಮಾಜಿ ಗ್ರಾ.ಪಂ ಸದಸ್ಯ ಪ್ರಸಾದ್ ಶೆಟ್ಟಿ ಎಣಿಂಜೆ ಈ ವೇಳೆ ಮೆಚ್ಚುಗೆ ವ್ಯಕ್ತಪಡಿಸಿದರು.. ಮುಳಿಯ ಜ್ಯುವೆಲ್ಲರ್ಸ್ ಸಿಬ್ಬಂದಿಗಳಾದ ವಿನಯಚಂದ್ರ, ಅಭಿಷೇಕ್ ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ಮದು ಕುಮಾರ್ ಸ್ವಾಗತಿಸಿದರು ಸಹಶಿಕ್ಷಕರಾದ  ಸಹಕರಿಸಿದರು.

error: Content is protected !!