ಒಂದೂವರೆ ವರ್ಷದ ಮಗುವನ್ನು ಕೊಂದ ಪ್ರಕರಣ,:40 ದಿನದಲ್ಲೆ ಆರೋಪಿಗೆ ಮರಣ ದಂಡನೆ ,ಮಹತ್ವದ ಆದೇಶ ನೀಡಿದ ಕೋರ್ಟ್:

 

 

 

ಉತ್ತರ ಪ್ರದೇಶ : ಮಗುವನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಗೆ ಘಟನೆ ನಡೆದು ಕೇವಲ 1 ತಿಂಗಳು 10 ದಿನಗಳಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿ ಕೋರ್ಟ್​ ಮಹತ್ವದ ತೀರ್ಪು ನೀಡಿದ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ  ಶುಕ್ರವಾರ ನಡೆದಿದೆ.,ಜಿಲ್ಲಾ ನ್ಯಾಯಾಧೀಶ ಡಾ. ಬಬ್ಬು ಸಾರಂಗ್ ಅವರು ತೀರ್ಪು ಪ್ರಕಟಿಸಿದ್ದು. ಮರಣದಂಡನೆ ಘೋಷಣೆಯಾದ ತಕ್ಷಣ, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದರು.

2026 ಮೇ 30 ರಂದು ಆರೋಪಿ ವಿರಾಜ್, ಮಗುವನ್ನು ಹೊಡೆದು ಕೊಂದಿದ್ದ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಮಗುವನ್ನು ಕೊಂದ ನಂತರ ಆರೋಪಿ, ಶವವನ್ನು ಮನೆಯ ಹೊರಗೆ ಬಿಟ್ಟು ಪರಾರಿಯಾಗಿದ್ದ. ಘಟನೆಯ ವಿಡಿಯೋ ಹೊರಬಂದ ನಂತರ, ಪೊಲೀಸರು ವಿರಾಜ್‌ನ ಎರಡೂ ಕಾಲುಗಳಿಗೆ ಗುಂಡು ಹಾರಿಸಿ ಬಂಧಿಸಿದ್ದರು.

ಫಿರೋಜಾಬಾದ್ ಜಿಲ್ಲೆಯ ಅರೌನ್ ಪೊಲೀಸ್ ಠಾಣೆ ಪ್ರದೇಶದ ಬಮೈ ಗ್ರಾಮದಲ್ಲಿ ವಾಸಿಸುವ ಮಗುವಿನ ತಾಯಿ ರತಿ ಪೊಲೀಸ್​ ಕಸ್ಟಡಿಯಲ್ಲಿದ್ದಾಳೆ ಎಂದು ಜಿಲ್ಲಾ ಸರ್ಕಾರಿ ವಕೀಲ ರಾಜೀವ್ ಉಪಾಧ್ಯಾಯ ತಿಳಿಸಿದರು.

ರತಿ ತನ್ನ ಗಂಡನೊಂದಿಗೆ ಮನಸ್ತಾಪದಿಂದ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದಳು. ಈ ಸಮಯದಲ್ಲಿ, ವಿರಾಜ್ ಅಲಿಯಾಸ್ ಜಿತೇಂದ್ರ ಪಾಠಕ್ ಎಂಬ ಯುವಕ ರತಿಯ ಒಡನಾಟ ಬೆಳೆಸಿದ್ದ, ಆತ ಸಂಬಂಧದಲ್ಲಿ ರತಿಯ ಸೋದರ ಮಾವನಾಗಿದ್ದ. ರತಿ ತನ್ನ ತಾಯಿಯೊಂದಿಗೆ ಫಿರೋಜಾಬಾದ್ ಜಿಲ್ಲೆಯ ಶಿಕೋಹಾಬಾದ್ ನಗರದ ಯಾದವ್ ಕಾಲೋನಿಯಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದಳು. ಮೇ 30 ರಂದು ವಿರಾಜ್, ಅಲ್ಲಿಗೆ ಬಂದು ರತಿಯ ಒಂದೂವರೆ ವರ್ಷದ ಮಗ ಆರವ್​ನನ್ನು ತಿಂಡಿ ಕೊಡಿಸುವ ನೆಪದಲ್ಲಿ ಮನೆಯಿಂದ ಹೊರಗೆ ಕರೆದೊಯ್ದು ಥಳಿಸಿ ಕೊಂದಿದ್ದ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿರಾಜ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಘಟನೆ ನಡೆದು ಕೆಲ ದಿನಗಳ ಬಳಿಕ ಗುಂಡು ಹಾರಿಸಿ ವಿರಾಜ್‌ನನ್ನು ಬಂಧಿಸಿ, ಜೈಲಿಗೆ ಕಳುಹಿಸಲಾಗಿತ್ತು. ಪೊಲೀಸರು ಪ್ರಕರಣದಲ್ಲಿ ತ್ವರಿತವಾಗಿ ಕಾರ್ಯನಿರ್ವಹಿಸಿದ್ದರು ಮತ್ತು ಕೇವಲ ಆರು ದಿನಗಳಲ್ಲಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ವಿಚಾರಣೆಯ ಸಮಯದಲ್ಲಿ ಅನೇಕ ಸಾಕ್ಷಿಗಳನ್ನು ಹಾಜರುಪಡಿಸಲಾಗಿದೆ ಎಂದು ಜಿಲ್ಲಾ ಸರ್ಕಾರಿ ವಕೀಲ ರಾಜೀವ್ ಉಪಾಧ್ಯಾಯ ಹೇಳಿದರು.

ಬಿಗಿ ಭದ್ರತೆಯ ನಡುವೆ ಜೈಲಿಗೆ: ನ್ಯಾಯಾಲಯದ ಮುಂದೆ ಪ್ರಾಸಿಕ್ಯೂಷನ್‌ ಹಲವು ಪುರಾವೆಗಳನ್ನು ಪ್ರಸ್ತುತಪಡಿಸಿತ್ತು. ಪ್ರಕರಣದ ವಿಚಾರಣೆ ಗುರುವಾರ ನಡೆಯಿತು. ಈ ಸಮಯದಲ್ಲಿ ವಿರಾಜ್ ಬಿಗಿ ಭದ್ರತೆಯಲ್ಲಿ ನ್ಯಾಯಾಲಯದಲ್ಲಿ ಹಾಜರಾಗಿದ್ದ. ವಕೀಲರ ವಾದಗಳನ್ನು ಆಲಿಸಿದ ನಂತರ, ನ್ಯಾಯಾಲಯವು ತೀರ್ಪನ್ನು ಕಾಯ್ದಿರಿಸಿತ್ತು. ಅಂತಿಮವಾಗಿ ಶುಕ್ರವಾರ, ನ್ಯಾಯಾಲಯವು ವಿರಾಜ್‌ಗೆ ಮರಣದಂಡನೆ ವಿಧಿಸಿದೆ

error: Content is protected !!