
ಬೆಳ್ತಂಗಡಿ : ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ ಇದರ 2026-27 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ಜು.8 ರಂದು ಗುರುವಾಯನಕೆರೆ ಬಂಟರ ಸಂಘದಲ್ಲಿ ನಡೆಯಿತು.
ಸಂಘದ ಗೌರವ ಮಾರ್ಗದರ್ಶಕರಾಗಿ ಶಶಿಧರ್ ಶೆಟ್ಟಿ ನವಶಕ್ತಿ, ನೂತನ ಅಧ್ಯಕ್ಷರಾಗಿ ಪ್ರಕಾಶ್ ಶೆಟ್ಟಿ ನೊಚ್ಚ, ಉಪಾಧ್ಯಕ್ಷರಾಗಿ ರಾಜು ಶೆಟ್ಟಿ, ಉಮೇಶ್ ಶೆಟ್ಟಿ ಉಜಿರೆ, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಶೆಟ್ಟಿ, ಕೋಶಾಧಿಕಾರಿಯಾಗಿ ವಸಂತ್ ಶೆಟ್ಟಿ ಶ್ರದ್ದಾ, ಜೊತೆ ಕಾರ್ಯದರ್ಶಿಯಾಗಿ ರವಿ ಶೆಟ್ಟಿ ಸುಲ್ಕೇರಿ ಅವಿರೋಧವಾಗಿ ಆಯ್ಕೆಯಾದರು.